alex Certify
ಕನ್ನಡ ದುನಿಯಾ       Mobile App
       

Kannada Duniya

ಒಮ್ಮೆಲೇ ರಜಾ ಹಾಕಿದ್ದಾರೆ 100 ಶಾಸಕರು, ಕಲಾಪಕ್ಕೆ 2 ದಿನ ಬ್ರೇಕ್

ಆಂಧ್ರಪ್ರದೇಶ ವಿಧಾನಸಭಾ ಕಲಾಪ ನಡೆಯುತ್ತಿದ್ರೂ 100ಕ್ಕೂ ಹೆಚ್ಚು ಶಾಸಕರಿಗೆ ಸಾಮೂಹಿಕ ರಜೆ ನೀಡಲಾಗಿದೆ. ಮದುವೆ ಸಮಾರಂಭಗಳಿಗೆ ತೆರಳಲು ಜನಪ್ರತಿನಿಧಿಗಳು ರಜಾ ಪಡೆದಿದ್ದಾರೆ. ಇದು ಮದುವೆ ಸೀಸನ್ ಅನ್ನೋದನ್ನೇ ನೆಪ ಮಾಡಿಕೊಂಡು ಕಲಾಪಕ್ಕೆ ಚಕ್ಕರ್ ಹಾಕಿದ್ದಾರೆ.

ಈ ತಿಂಗಳ ಆರಂಭದಲ್ಲೇ ಆಂಧ್ರಪ್ರದೇಶ ವಿಧಾನಸಭೆ ಕಲಾಪ ಶುರುವಾಗಿತ್ತು, ನವೆಂಬರ್ 30ಕ್ಕೆ ಅಧಿವೇಶನ ಮುಗಿಯಬೇಕಿತ್ತು. ಆಡಳಿತಾರೂಢ ಟಿಡಿಪಿಯ 100 ಶಾಸಕರು ವೀಕೆಂಡ್ ಬೆನ್ನಲ್ಲೇ ಇನ್ನೂ 2 ದಿನ ರಜಾ ಹಾಕಿದ್ದಾರೆ. ಇದಕ್ಕೆ ಸ್ಪೀಕರ್ ಕೂಡ ಸಮ್ಮತಿಸಿದ್ದಾರೆ.

ಹಾಗಾಗಿ ಅಧಿವೇಶನಕ್ಕೆ ಎರಡು ದಿನಗಳ ಬ್ರೇಕ್ ನೀಡಲಾಗಿದೆ. ಆಂಧ್ರದ ಜನಪ್ರತಿನಿಧಿಗಳು ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಕಳೆದ ವರ್ಷವಷ್ಟೇ ವೇತನವನ್ನು 95,000 ರೂ.ನಿಂದ 1.25 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...