alex Certify
ಕನ್ನಡ ದುನಿಯಾ       Mobile App
       

Kannada Duniya

150 ವರ್ಷಗಳ ಬಳಿಕ ಜ್ವಾಲಾಮುಖಿ ಸಕ್ರಿಯ

jwalamuki

ಪಣಜಿ: ಭಾರತದ ಏಕೈಕ ಜೀವಂತ ಜ್ವಾಲಾಮುಖಿ 150 ವರ್ಷಗಳ ಬಳಿಕ ಮತ್ತೆ ಸಕ್ರಿಯವಾಗಿದ್ದು, ಬೆಂಕಿ, ಬೂದಿಯನ್ನು ಉಗುಳುತ್ತಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಬರೇನ್ ದ್ವೀಪದಲ್ಲಿರುವ ದೇಶದ ಏಕೈಕ ಜೀವಂತ ಜ್ವಾಲಾಮುಖಿ 1991 ರಲ್ಲಿಯೇ ಸಕ್ರಿಯವಾಗುವ ಸೂಚನೆ ನೀಡಿತ್ತು.

ಇಷ್ಟು ದಿನಗಳ ಕಾಲ ಸುಪ್ತವಾಗಿದ್ದ ಜ್ವಾಲಾಮುಖಿ ಮತ್ತೆ ಸಕ್ರಿಯವಾಗಿದೆ ಎಂದು ರಾಷ್ಟ್ರೀಯ ಸಮುದ್ರ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ತಿಳಿಸಿದ್ದಾರೆ.

ಬರೇನ್ ದ್ವೀಪದ 1 ಕಿಲೋ ಮೀಟರ್ ದೂರದಲ್ಲೇ ಜ್ವಾಲಾಮುಖಿಯಿಂದ ಬೆಂಕಿ, ಲಾವಾ ಬರುತ್ತಿರುವುದನ್ನು ಗಮನಿಸಲಾಗಿದೆ. ಜನವರಿ 23 ಮತ್ತು 26 ರಂದು ಈ ಪ್ರದೇಶದಲ್ಲಿ ವಿಜ್ಞಾನಿಗಳು ಜ್ವಾಲಾಮುಖಿ ಬಾಯಿಯಿಂದ ಲಾವಾ ಬರುವುದನ್ನು ಕಂಡಿದ್ದಾರೆ. ಆತಂಕದ ನಡುವೆಯೂ ವಿಜ್ಞಾನಿಗಳು ಸಹಜ ಕುತೂಹಲದಿಂದ ಜ್ವಾಲಾಮುಖಿಯ ಕುರಿತಾಗಿ ಹೆಚ್ಚಿನ ಅಧ್ಯಯನ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...