alex Certify
ಕನ್ನಡ ದುನಿಯಾ       Mobile App
       

Kannada Duniya

2000 ರೂ. ನೋಟು ಇಟ್ಕೊಂಡು ಹೀಗೂ ಮಾಡ್ತಾರೆ ಮೋಸ….

uber-2000

500 ಮತ್ತು 1000 ರೂಪಾಯಿ ನೋಟುಗಳ ನಿಷೇಧದ ನಂತರ ಸರ್ಕಾರ 2000 ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ. ಎಟಿಎಂ ಮತ್ತು ಬ್ಯಾಂಕ್ ಗಳಲ್ಲಿ 2000 ರೂಪಾಯಿ ನೋಟುಗಳೇನೋ ಸಿಗುತ್ತಿವೆ, ಆದ್ರೆ ಎಲ್ಲೂ ಅದಕ್ಕೆ ಚಿಲ್ಲರೆ ಸುಲಭವಾಗಿ ಸಿಗುತ್ತಿಲ್ಲ. ಅಂಗಡಿಗಳಲ್ಲಂತೂ 2000 ನೋಟು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ.

ಅಂಥದ್ರಲ್ಲಿ ಉಬರ್ ಕ್ಯಾಬ್ ಚಾಲಕನೊಬ್ಬ 2000 ರೂಪಾಯಿಯ ಹೊಸ ನೋಟನ್ನು ಬುದ್ಧಿವಂತಿಕೆಯಿಂದ ದುರುಪಯೋಗ ಮಾಡಿಕೊಂಡಿದ್ದಾನೆ. ಚೆನ್ನೈನಲ್ಲಿ ಕ್ರಿಶ್ ಅಶೋಕ್ ಎಂಬುವವರಿಗೆ ಆದ ಅನುಭವ ಇದು. ಈ ಘಟನೆ ಬಗ್ಗೆ ಕ್ರಿಶ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಕ್ರಿಶ್ ಉಬರ್ ಕ್ಯಾಬ್ ನಲ್ಲಿ ಪ್ರಯಾಣಿಸ್ತಾ ಇದ್ರು, ಓಎಮ್ಆರ್ ಟೋಲ್ ಪ್ಲಾಜಾ ಬಳಿ ಬರ್ತಿದ್ದಂತೆ ಚಾಲಕ ಅವರ ಬಳಿ 2000 ರೂಪಾಯಿ ನೋಟು ಇದ್ಯಾ ಅಂತಾ ಕೇಳಿದ. ಕ್ರಿಶ್ ತೆಗೆದುಕೊಟ್ರು, ಅದನ್ನು ಉಬರ್ ಚಾಲಕ ಟೋಲ್ ಸಿಬ್ಬಂದಿಗೆ ಕೊಟ್ಟಿದ್ದಾನೆ. 2000 ರೂಪಾಯಿಗೆ ಚಿಲ್ಲರೆ ಇಲ್ಲ ಅಂತಾ ಟೋಲ್ ಸಿಬ್ಬಂದಿ ಹಣ ಕಟ್ಟಿಸಿಕೊಳ್ಳದೆ ಹಾಗೇ ಕಳುಹಿಸಿದ್ದಾರೆ. ಇದೇ ರೀತಿ ಎಲ್ಲಾ ಟೋಲ್ ಗಳಲ್ಲೂ ಚಾಲಕ 2000 ರೂಪಾಯಿ ನೋಟು ಕೊಟ್ಟು ಹಣ ಕಟ್ಟದೆ ಉಳಿತಾಯ ಮಾಡ್ತಾ ಇದ್ದ. ಟೋಲ್ ಫೀ ಹೆಸರಲ್ಲಿ ಸಂಸ್ಥೆಯಿಂದ ಹಣ ಪಡೆಯುತ್ತಿದ್ದ. ಕ್ರಿಶ್ ಅವರಂತೆ ಹಲವು ಪ್ರಯಾಣಿಕರಿಗೆ ಇದೇ ರೀತಿಯ ಅನುಭವವಾಗಿದೆ. ಕ್ರಿಶ್ ಅವರ ಈ ಟ್ವೀಟ್ ವೈರಲ್ ಆಗಿದ್ದು, ಚಾಲಕನ ಅಪ್ರಾಮಾಣಿಕತೆ ಬಗ್ಗೆ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆಯೇ..?

    View Results

    Loading ... Loading ...