alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋ ಚಾಲಕನಿಂದ ವಂಚನೆಗೊಳಗಾದ್ಲು ನಟಿ

megha_14ಬಾಲಿವುಡ್ ನಲ್ಲಿ ಅವಕಾಶ ಅರಸಿ ಬಂದು ಧಾರಾವಾಹಿಗಳಲ್ಲಿ ಪಾತ್ರ ಗಿಟ್ಟಿಸಿಕೊಂಡಿದ್ದ ಪಶ್ಚಿಮ ಬಂಗಾಳದ ನಟಿಯೊಬ್ಬಳಿಗೆ ಆಟೋ ಚಾಲಕ ಪಂಗನಾಮ ಹಾಕಿದ್ದಾನೆ. ತಾನು ವಂಚನೆಗೊಳಗಾಗಿರುವುದನ್ನು ಅರಿತ ನಟಿ, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತನ್ನ ಕೋಪ ಪ್ರದರ್ಶನ ಮಾಡಿದ್ದಾಳೆ.

ಇತ್ತೀಚೆಗೆ ನಟಿ ಮೇಘಾ ಚಕ್ರವರ್ತಿ, ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆಕೆ ತನ್ನ ಸ್ಥಳದಲ್ಲಿ ಇಳಿದ ಬಳಿಕ ಚಾಲಕ ಚಿಲ್ಲರೆ ನೀಡಿದ್ದಾನೆ. ಅದರಲ್ಲಿ 100 ರೂ. ನೋಟು ಸಹ ಇದ್ದು, ಮೇಘಾ ಚಕ್ರವರ್ತಿ ಚಿಲ್ಲರೆ ಪಡೆದು ತೆರಳಿದ್ದಾರೆ.

ಆದರೆ ಮಾರನೇ ದಿನ ತಮ್ಮ ಬಳಿಯಿದ್ದ ಹಣವನ್ನು ಎಣಿಸುತ್ತಿದ್ದ ಮೇಘಾ ಚಕ್ರವರ್ತಿಗೆ ಶಾಕ್ ಕಾದಿದೆ. ಆಟೋ ಚಾಲಕ, ಮಕ್ಕಳು ಆಟವಾಡಲು ಬಳಸುವ ನಕಲಿ ನೋಟನ್ನು ಆಕೆಗೆ ನೀಡಿದ್ದಾನೆ. ತಾನು ಮೋಸ ಹೋಗಿರುವುದನ್ನು ಅರಿತು ಆಕ್ರೋಶಗೊಂಡ ಮೇಘಾ ಚಕ್ರವರ್ತಿ, ತಾವು ಪಡೆದಿದ್ದ ನಕಲಿ ನೋಟಿನ ಚಿತ್ರದ ಸಮೇತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತಮ್ಮ ಅನುಭವವನ್ನು ಶೇರ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...