alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈನಲ್ಲಿದೆ ಸಾವಿರ ಹಾರನ್ ಹೊಂದಿರುವ ಆಟೋ…!

ಇಡೀ ವಿಶ್ವದಲ್ಲೇ ಶಬ್ಧಮಾಲಿನ್ಯ ಅತ್ಯಧಿಕವಾಗಿರುವುದು ಭಾರತದಲ್ಲಿ. ರಸ್ತೆಗಳಲ್ಲಿ ಕಿವಿಗಡಚಿಕ್ಕುವ ವಾಹನಗಳ ಹಾರನ್ ಸದ್ದು ಶಬ್ಧಮಾಲಿನ್ಯಕ್ಕೆ ಮೂಲ ಕಾರಣ. ಇದರಿಂದಾಗುವ ಪರಿಣಾಮ ಅತ್ಯಂತ ಅಪಾಯಕಾರಿ ಎನ್ನುತ್ತಾರೆ ವೈದ್ಯರು.

ಹಾಗಾಗಿ ಮುಂಬೈನಲ್ಲಿ ಅನಾವಶ್ಯಕವಾಗಿ ಹಾರನ್ ಬಾರಿಸದಂತೆ ಜಾಗೃತಿ ಮೂಡಿಸಲು ವಿಶಿಷ್ಟ ಅಭಿಯಾನ ಶುರುವಾಗಿದೆ. ಮಹಾರಾಷ್ಟ್ರ ಸಾರಿಗೆ ಇಲಾಖೆಯೊಂದಿಗೆ ಆವಾಝ್ ಫೌಂಡೇಶನ್ ಈ ಅಭಿಯಾನವನ್ನು ಹಮ್ಮಿಕೊಂಡಿದೆ.

ಹಾರ್ನ್ ವೃತ್ ಅನ್ನೋದು ಈ ಅಭಿಯಾನದ ಹೆಸರು. ಆಟೋ ರಿಕ್ಷಾ ತುಂಬೆಲ್ಲಾ ಹಾರನ್ ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮುಂಬೈನಲ್ಲಿ ಪ್ರತಿನಿತ್ಯ ಜನರು 18 ಮಿಲಿಯನ್ ಬಾರಿ ಹಾರನ್ ಬಾರಿಸುತ್ತಾರಂತೆ.

ಹಾಗಾಗಿ ಇನ್ಮೇಲಾದ್ರೂ ಅನಾವಶ್ಯಕವಾಗಿ ಹಾರನ್ ಬಾರಿಸೋದು ಬಿಡಿ ಅನ್ನೋದು ಇವರ ಮನವಿ. ಕಳೆದ ಡಿಸೆಂಬರ್ ನಲ್ಲೂ ಆವಾಝ್ ಫೌಂಡೇಶನ್ ಇಂಥದ್ದೇ ವಿಶಿಷ್ಟ ಅಭಿಯಾನ ನಡೆಸಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...