alex Certify
ಕನ್ನಡ ದುನಿಯಾ       Mobile App
       

Kannada Duniya

ಉಗ್ರ ಸಂಘಟನೆ ಸೇರಿದ್ದಾನೆ ಸಂಶೋಧನಾ ವಿದ್ಯಾರ್ಥಿ

ಅಲಿಗಢ ಮುಸ್ಲಿಂ ಯೂನಿವರ್ಸಿಟಿಯ ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿ ಮನನ್ ಬಶೀರ್ ವಾನಿ ಕಾಶ್ಮೀರದಲ್ಲಿರುವ ತನ್ನ ಕುಟುಂಬಸ್ಥರನ್ನು ಭೇಟಿಯಾಗಲು ತೆರಳಿದ್ದವನು ದಿಢೀರನೆ ನಾಪತ್ತೆಯಾಗಿದ್ದ. ನಂತರ ಕೈಯಲ್ಲಿ ಗನ್ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷನಾಗಿದ್ದ.

ಮನನ್ ಈಗ ಉಗ್ರ ಸಂಘಟನೆ ಸೇರಿದ್ದಾನಂತೆ. ಹಾಗಂತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಹೇಳಿಕೊಂಡಿದೆ. ಭಾನುವಾರವಷ್ಟೆ ಮನನ್ ಎಕೆ ರೈಫಲ್ ಹಿಡಿದಿರೋ ಫೋಟೋ ವೈರಲ್ ಆಗಿತ್ತು. ಭಾರತದಲ್ಲಿರುವ ನಿರುದ್ಯೋಗ ಮತ್ತು ಆರ್ಥಿಕ ಸಮಸ್ಯೆಯಿಂದಾಗಿಯೇ ಯುವಕರು ಭಯೋತ್ಪಾದಕರಾಗುತ್ತಿದ್ದಾರೆ.

ನಮ್ಮ ಸಂಘಟನೆ ಸೇರುವ ಮೂಲಕ ಸ್ವಾತಂತ್ರ್ಯ ಹೋರಾಟ ಮುಂದುವರಿಸುತ್ತಾರೆ ಅಂತಾ ಹಿಜ್ಬುಲ್ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಲುದ್ದೀನ್ ಹೇಳಿಕೊಂಡಿದ್ದಾನೆ. ಮನನ್ ಭಯೋತ್ಪಾದಕ ಸಂಘಟನೆ ಸೇರಿರುವ ಸುದ್ದಿ ಕೇಳಿ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.

ತಾಯಿ ಮತ್ತು ಸಹೋದರಿ ಕಣ್ಣೀರು ಹಾಕ್ತಿದ್ದಾರೆ. ಮನನ್ ಭೂವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದ. ಯೂನಿವರ್ಸಿಟಿ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದ. ಸದ್ಯ ಆತನನ್ನು ಅಲಿಗಢ ಮುಸ್ಲಿಂ ಯೂನಿವರ್ಸಿಟಿಯಿಂದ ವಜಾ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...