alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿಗಾಗಿ ಜೀವ ಹಿಡಿದಿಟ್ಟುಕೊಂಡಿದ್ದಾಳೆ ಪತಿ ಕಳೆದುಕೊಂಡ ಗರ್ಭಿಣಿ

ತೆಲಂಗಾಣದಲ್ಲಿ ಶುಕ್ರವಾರ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಮಿರ್ಯಾಲಗುಡ ನಗರದಲ್ಲಿ ಹಾಡಹಗಲು ಗರ್ಭಿಣಿ ಎದುರಲ್ಲೇ ಪತಿಯನ್ನು ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ಯೆಗೆ ಸಂಚು ರೂಪಿಸಿದ್ದು ಗರ್ಭಿಣಿ ತಂದೆ ಎಂಬುದು ಗೊತ್ತಾಗಿದೆ. 1 ಕೋಟಿಗೆ ವ್ಯವಹಾರ ಕುದುರಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

24 ವರ್ಷದ ಅಮೃತ ವರ್ಷಿಣಿ ಹಾಗೂ ಪ್ರಣಯ್ ಒಬ್ಬರನ್ನೊಬ್ಬರು ಪ್ರೀತಿಸ್ತಿದ್ದರು. ಜಾತಿ ಬೇರೆಯಾದ ಕಾರಣ ಮದುವೆಗೆ ಪಾಲಕರು ಅಡ್ಡಿಯುಂಟು ಮಾಡಿದ್ದರು. ಇದೇ ಕಾರಣಕ್ಕೆ ಮನೆಬಿಟ್ಟು ಬಂದಿದ್ದ ಅಮೃತವರ್ಷಿಣಿ, ಪ್ರಣಯ್ ನನ್ನು ಮದುವೆಯಾಗಿದ್ದಳು. ಮದುವೆಯಾದ ನಂತ್ರ ಇಬ್ಬರು ಸುಂದರ ಫೋಟೋಗಳಿಗೆ ಫೋಸ್ ನೀಡಿದ್ದರು.

ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ ತಂದೆ, ಮಗಳು ಗರ್ಭಿಣಿ ಎಂಬುದು ತಿಳಿಯುತ್ತಿದ್ದಂತೆ ಮತ್ತಷ್ಟು ಕೋಪಗೊಂಡಿದ್ದ. ಗರ್ಭಪಾತ ಮಾಡಿಸುವಂತೆ ಒತ್ತಡ ಹೇರಿದ್ದ. ಆದ್ರೆ ಇದಕ್ಕೆ ಅಮೃತವರ್ಷಿಣಿ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಸುಪಾರಿ ಕೊಟ್ಟು ಅಳಿಯನನ್ನು ಹತ್ಯೆ ಮಾಡಿಸಿದ್ದಾನೆ.

ಗರ್ಭಿಣಿ ಅಮೃತವರ್ಷಿಣಿ ಕಣ್ಣೆದುರಲ್ಲೇ ಪತಿ ಪ್ರಣಯ್ ಪ್ರಾಣ ಬಿಟ್ಟಿದ್ದಾನೆ. ನಾನು ಬದುಕಿರಲು ಒಂದೇ ಒಂದು ಕಾರಣ ನನ್ನ ಮಗು ಎಂದು ಅಮೃತವರ್ಷಿಣಿ ಹೇಳಿದ್ದಾಳೆ. ಮಗುವಿನಲ್ಲಿ ಪತಿ ಪ್ರಣಯ್ ಕಾಣುತ್ತ ಜೀವನ ಸಾಗಿಸುತ್ತೇನೆ ಎಂದಿರುವ ಅಮೃತವರ್ಷಿಣಿ, ಪ್ರಣಯ್ ಮನೆಯಲ್ಲಿಯೇ ಇರಲಿದ್ದಾಳಂತೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಣಯ್ ಗೆ ನ್ಯಾಯ ದೊರಕಿಸಿಕೊಡಲು ಅಭಿಯಾನ ಶುರುವಾಗಿದೆ. Justice for pranay ಫೇಸ್ಬುಕ್ ಪೇಜ್ ಓಪನ್ ಆಗಿದ್ದು, 62,000 ಜನರು ಇದನ್ನು ಲೈಕ್ ಮಾಡಿದ್ದಾರೆ. ಪ್ರಣಯ್ ಪತ್ನಿ ಅಮೃತವರ್ಷಿಣಿ ಫೇಸ್ಬುಕ್ ನಲ್ಲಿ ತನ್ನ ಹೆಸ್ರನ್ನು ಅಮೃತ ಪ್ರಣಯ್ ಎಂದು ಬರೆದಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...