alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವೀಯತೆ ಮರೆತ ತಂದೆ ಮಕ್ಕಳನ್ನು ಕರೆಂಟ್ ಕಂಬಕ್ಕೆ ಕಟ್ಟಿ ಹೊಡೆದ

ಉತ್ತರ ಪ್ರದೇಶದ ಅಮರೋಹಾದಲ್ಲಿ ತಂದೆಯೊಬ್ಬನ ಕ್ರೌರ್ಯ ಬಹಿರಂಗವಾಗಿದೆ. ಮಕ್ಕಳು 10 ರೂಪಾಯಿ ಕಳೆದಿದ್ದಾರೆನ್ನುವ ಕಾರಣಕ್ಕೆ ತಂದೆ, ಮಕ್ಕಳಿಗೆ ಕಠಿಣ ಶಿಕ್ಷೆ ನೀಡಿದ್ದಾನೆ. ಇದ್ರ ಫೋಟೋ ವೈರಲ್ ಆಗಿದೆ.

ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳನ್ನು ಕರೆಂಟ್ ಕಂಬಕ್ಕೆ ನೇತು ಹಾಕಿ ಹೊಡೆದಿದ್ದಾನೆ. ಘಟನೆ ಸೇಲಂಪುರದ ಮೊಹಲ್ಲಾ ಜಲಾಲ್ ಪ್ರದೇಶದಲ್ಲಿ ನಡೆದಿದೆ. ಆರೋಪಿ ನಿರುದ್ಯೋಗಿ ತಂದೆ ಇದೇ ಮೊದಲಲ್ಲ, ಈ ಹಿಂದೆ ಕೂಡ ಮಕ್ಕಳಿಗೆ ಹಿಂಸೆ ನೀಡಿದ್ದಾನೆ. ಭಾನುವಾರ 10 ರೂಪಾಯಿ ಕಳುವಾಗಿದೆ ಎನ್ನುವ ಕಾರಣಕ್ಕೆ 5 ವರ್ಷ ಮಗಳು, ನಾಲ್ಕು ಹಾಗೂ ಮೂರು ವರ್ಷದ ಗಂಡು ಮಕ್ಕಳನ್ನು ಕರೆಂಟ್ ಕಂಬಕ್ಕೆ ನೇತುಹಾಕಿ ಹೊಡೆದಿದ್ದಾನೆ.

ಮಕ್ಕಳಿಗೆ ತಂದೆ ಹೊಡೆಯುತ್ತಿರುವ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾನೆ. ಫೋಟೋ ವೈರಲ್ ಆಗ್ತಿದ್ದಂತೆ ಆರೋಪಿ ತಂದೆ ಪರಾರಿಯಾಗಿದ್ದಾನೆ. ತಂದೆಯಿಂದ ಹೊಡೆತ ತಿನ್ನುತ್ತಿದ್ದ ಮಕ್ಕಳು ಅಳ್ತಿದ್ದ ಶಬ್ಧ ಕೇಳಿ ಸ್ಥಳೀಯರು ಅಲ್ಲಿಗೆ ಬಂದಿದ್ದರು. ತಂದೆಗೆ ಬುದ್ದಿ ಹೇಳಿ ಮಕ್ಕಳನ್ನು ರಕ್ಷಿಸಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...