alex Certify
ಕನ್ನಡ ದುನಿಯಾ       Mobile App
       

Kannada Duniya

ಎದೆ ನಡುಗಿಸುತ್ತೆ ರೈಲು ದುರಂತದ ಈ ವಿಡಿಯೋ

ಅಮೃತಸರ: ರಾವಣ ದಹನದ ಸನ್ನಿವೇಶವನ್ನು ಮೈಮರೆತು ಮೊಬೈಲ್ ಗಳಲ್ಲಿ ಸೆರೆ ಹಿಡಿಯುತ್ತಿದ್ದಿದ್ದೇ ಪಂಜಾಬ್ ನ ಅಮೃತಸರದಲ್ಲಿ ನಡೆದ ಭೀಕರ ರೈಲು ದುರಂತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತದೆ.

ಪ್ರತ್ಯಕ್ಷದರ್ಶಿಗಳೇ ಚಿತ್ರೀಕರಿಸಿರುವ ವಿಡಿಯೋ ಗಮನಿಸಿದರೆ ರೈಲ್ವೆ ಹಳಿ ಮೇಲೆ ಇದ್ದ ನಾಗರಿಕರು ಸೆಲ್ಫೀ ಹಾಗೂ ದಹನದ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದುದು ಕಂಡುಬರುತ್ತದೆ. ಎಷ್ಟರಮಟ್ಟಿಗೆ ಎಂದರೆ ಪಕ್ಕದಲ್ಲಿದ್ದವರು ಸಾಲುಸಾಲಾಗಿ ಹಳಿಯಡಿ ಸಿಲುಕಿದ್ದರೂ ತಿಳಿಯದಷ್ಟು ತಲ್ಲೀನತೆ ಅದರಲ್ಲಿ ಕಾಣುತ್ತಿತ್ತು.

ಈ ದುರಂತದಲ್ಲಿ ಸುಮಾರು 61ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರೆ, 20ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧು ದುರಂತದ ಬಗ್ಗೆ ಪ್ರತಿಕ್ರಿಯಿಸಿ, ರೈಲ್ವೆ ಹಳಿ ಮೇಲೆ ನಿಂತು ಸಂತೋಷದಲ್ಲಿ ಮುಳುಗಿದ್ದ ನಾಗರಿಕರು ಸೆಲ್ಫೀ ತೆಗೆದುಕೊಳ್ಳುವುರಲ್ಲಿ ನಿರತರಾಗಿದ್ದರು ಎಂದಿದ್ದಾರೆ.

ಹಲವಾರು ರಾಜಕೀಯ ನಾಯಕರು ಟ್ವಿಟರ್ ನಲ್ಲಿ ದುರಂತದ ಬಗ್ಗೆ ಪ್ರತಿಕ್ರಿಯಿಸಿದ್ದು, ಘಟನೆಗೆ ಸೆಲ್ಫೀ ಸಂಸ್ಕೃತಿಯೇ ಕಾರಣ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ”ಇದೊಂದು ನಡೆಯದಂತೆ ಎಚ್ಚರ ವಹಿಸಬಹುದಾದ ದುರಂತ. ಈ ವಿಡಿಯೋ ಗಮನಿಸಿದರೆ, ರೈಲು ತಮ್ಮ ಮೇಲೆ ಹರಿಯುತ್ತಿದ್ದರೂ ವಿಡಿಯೋ ಮಾಡುವುದರಲ್ಲೇ ಮಗ್ನರಾಗಿರುವುದು ತಿಳಿಯುತ್ತದೆ’’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಪ್ರತಿಕ್ರಿಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...