alex Certify
ಕನ್ನಡ ದುನಿಯಾ       Mobile App
       

Kannada Duniya

ಅಯ್ಯೋ ದೇವರೇ…! ಕಡು ಕಷ್ಟದಲ್ಲೂ ಜನರಿಗೆ ಬರಲಿಲ್ಲವೇ ಮಾನವೀಯತೇ…?

ಅಮೃತಸರ: ಕಾಲ ಬದಲಾಗಿದೆಯೋ ಮನುಷ್ಯ ಬದಲಾಗಿದ್ದನೊ ಗೊತ್ತಿಲ್ಲ. ಆದರೆ ಮಾನವೀಯತೆ ಮಾತ್ರ ನಶಿಸುತ್ತಿದೆ ಎಂಬುದಕ್ಕೆ ಇತ್ತೀಚೆಗೆ ಅಮೃತಸರದಲ್ಲಿ ನಡೆದ ಭೀಕರ ರೈಲು ದುರಂತವೇ ಸಾಕ್ಷಿ.

ಜನರ ಮೇಲೆ ರೈಲು ಹರಿದು ಸಾವು-ನೋವಿಗೆ ಸಿಕ್ಕಿ ನಲುಗಿ ಹೋಗಿದ್ದವರು ಒಂದು ಕಡೆಯಾದರೆ ಸಿಕ್ಕಿದ್ದೇ ಛಾನ್ಸ್ ಎಂಬ ಮನಃಸ್ಥಿತಿಯವರು ಇನ್ನೊಂದು ಕಡೆ.

ನೋವಿನಲ್ಲಿದ್ದವರಿಗೆ ಸಹಾಯ ಮಾಡುವ ಬದಲು ಮೃತ ವ್ಯಕ್ತಿಗಳ ಮೊಬೈಲ್, ಪರ್ಸ್ ಕದ್ದು ತಮ್ಮ ಹೀನ ಮನಸ್ಥಿತಿಯನ್ನು ಕೆಲವರು ಮೆರೆದಿದ್ದಾರೆ. ಹಾಗೇ ಈ ದುರಂತದಲ್ಲಿಯೂ ಸೆಲ್ಪಿ ಕ್ಲಿಕ್ಕಿಸಿಕೊಂಡವರು ಇದ್ದಾರೆ.

ಮೃತ ವ್ಯಕ್ತಿಗಳ ದೇಹವನ್ನು ಪಡೆದ ಮನೆಯವರು ತಮ್ಮವರ ಮೈ ಮೇಲಿದ್ದ ಆಭರಣ, ಪರ್ಸ್, ಮೊಬೈಲ್ ಇಲ್ಲದೇ ಇರುವುದನ್ನು ಗಮನಿಸಿ ಈ ಆರೋಪ ಮಾಡಿದ್ದಾರೆ. ಪ್ರಕರಣದ ಕುರಿತಾಗಿ ರೈಲ್ವೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...