alex Certify
ಕನ್ನಡ ದುನಿಯಾ       Mobile App
       

Kannada Duniya

‘ರಾಮಲೀಲಾ’ದಲ್ಲಿ ರಾವಣನ ಪಾತ್ರ ಮಾಡಿದ್ದ ವ್ಯಕ್ತಿ ರೈಲು ದುರಂತದಲ್ಲಿ ಸಾವು

ವಿಜಯದಶಮಿಯಂದು ಪಂಜಾಬಿನ ಅಮೃತಸರದಲ್ಲಿ ಏರ್ಪಡಿಸಿದ್ದ ರಾಮಲೀಲಾದ ರಾವಣ ದಹನ ಕಾರ್ಯಕ್ರಮದಲ್ಲಿ ರಾವಣನ ಪಾತ್ರ ಮಾಡಿದ್ದ ವ್ಯಕ್ತಿಯೂ ರೈಲು ದುರಂತದಲ್ಲಿ ಸಾವನ್ನಪ್ಪಿದ್ದಾನೆ.

ಈ ದುರಂತದಲ್ಲಿ 60 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ರಾವಣ ದಹನ ಮಾಡುತ್ತಿರುವ ವೇಳೆ ಅದನ್ನು ನೋಡಲು ರೈಲು ಹಳಿ ಮೇಲೆ ನಿಂತಿದ್ದ ನೂರಾರು ಮಂದಿ ಮೇಲೆ ರೈಲು ಹರಿದಿತ್ತು. ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ರಾವಣ ಪಾತ್ರಧಾರಿ ದಲ್ಬೀರ್ ಸಿಂಗ್ ಸಾವನ್ನಪ್ಪಿದ ಬಳಿಕ ಅವರ ಕುಟುಂಬ ದುಃಖದ ಕಡಲಲ್ಲಿ ಮುಳುಗಿದ್ದು, ಮಗನನ್ನು ಕಳೆದುಕೊಂಡು ನಮ್ಮ ಕುಟುಂಬ ಅನಾಥವಾಗಿದೆ ಎಂದಿರುವ ದಲ್ಬೀರ್ ಸಿಂಗ್ ಅವರ ತಾಯಿ, ಮುಂದಿನ ಜೀವನೋಪಾಯಕ್ಕಾಗಿ ನನ್ನ ಸೊಸೆಗೆ ಸರ್ಕಾರಿ ನೌಕರಿ ನೀಡಿ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...