alex Certify
ಕನ್ನಡ ದುನಿಯಾ       Mobile App
       

Kannada Duniya

ಮಗು, ಪತಿಯನ್ನು ಕಳೆದುಕೊಂಡ್ರೂ ಮಾನವೀಯತೆ ಮೆರೆದ ಮಹಿಳೆ

ಅಮೃತಸರದ ಘಟನೆ ನಡೆದು ಇಂದಿಗೆ ಮೂರು ದಿನ ಕಳೆದಿದೆ. ಆದ್ರೂ ಆ ದುಃಸ್ವಪ್ನದಿಂದ ಹೊರ ಬರಲು ಸಾಧ್ಯವಾಗ್ತಿಲ್ಲ. 55 ವರ್ಷದ ಮೀನಾ ದೇವಿ ಕೂಡ ಈ ದುರ್ಘಟನೆಯಲ್ಲಿ ಗಾಯಗೊಂಡಿದ್ದಾರೆ. ಆದ್ರೆ ಅವ್ರು ಮಾಡಿದ ಕೆಲಸ ಮಾತ್ರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ರಾವಣ ದಹನ ಕಾರ್ಯಕ್ರಮದಲ್ಲಿ ಮೀನಾ ದೇವಿ ಕೂಡ ಪಾಲ್ಗೊಂಡಿದ್ದರು. ರೈಲ್ವೆ ಹಳಿ ಮೇಲೆ ನಿಂತಿದ್ದ ವ್ಯಕ್ತಿಯೊಬ್ಬನ ಕೈನಲ್ಲಿ 10 ತಿಂಗಳ ಮಗುವಿತ್ತು. ರೈಲು ವ್ಯಕ್ತಿಗೆ ಗುದ್ದುತ್ತಿದ್ದಂತೆ ಮಗು ಸಮೇತ ಆತ ಮೇಲೆ ಹಾರಿದ್ದಾನೆ. ಆತನ ಕೈನಲ್ಲಿದ್ದ ಮಗು ಮೀನಾ ದೇವಿ ಕೈ ಸೇರಿದೆ. ಗಾಯವಾದ್ರೂ ಅದನ್ನು ಪರಿಗಣಿಸದ ಮೀನಾ ದೇವಿ 10 ತಿಂಗಳ ಮಗುವನ್ನು ರಕ್ಷಣೆ ಮಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಮೀನಾ, ಮಗುವನ್ನು ರಕ್ಷಣೆ ಮಾಡಿದ್ದೇನೆ. ಪಾಲಕರು ಸಿಗದೆ ಹೋದ್ರೆ ಮಗುವನ್ನು ನಾನೇ ಸಾಕುತ್ತೇನೆ ಎಂದಿದ್ದಾರೆ. ಮಗುವಿನ ತಂದೆ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾನಂತೆ. ತಾಯಿ ಅಮೃತಸರದ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ದುಃಖದ ಸಂಗತಿ ಏನೆಂದ್ರೆ ಮಗುವನ್ನು ಬದುಕಿಸಿದ ಮೀನಾ ಕೂಡ ದುರ್ಘಟನೆಯಲ್ಲಿ ತನ್ನ ಮಗು ಹಾಗೂ ಪತಿಯನ್ನು ಕಳೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...