alex Certify
ಕನ್ನಡ ದುನಿಯಾ       Mobile App
       

Kannada Duniya

10 ವರ್ಷಗಳ ನಂತ್ರ ಮನೆಯಲ್ಲಿ ಕೇಳ್ತು 4 ಮಕ್ಕಳ ಅಳು

13_08_2017-asrchild

ಹತ್ತು ವರ್ಷಗಳ ನಂತ್ರ ಮಹಿಳೆಯೊಬ್ಬಳ ಮನೆಯಲ್ಲಿ ಒಂದೇ ಬಾರಿ 4 ಮಕ್ಕಳ ಅಳು ಕೇಳಿಸಿದೆ. ಮೂವರು ಗಂಡು ಮಕ್ಕಳು ಹಾಗೂ ಲಕ್ಷ್ಮಿಯೊಬ್ಬಳು ಮನೆಗೆ ಬಂದಿದ್ದಾಳೆ.

ಪಂಜಾಬಿನ ಅಮೃತಸರದಲ್ಲಿ ಮಹಿಳೆಯೊಬ್ಬಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಮಹಿಳೆಗೆ ಈ ಹಿಂದೆಯೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 10 ವರ್ಷಗಳ ನಂತ್ರ ಮತ್ತೆ ನಾಲ್ಕು ಮಕ್ಕಳಿಗೆ ಮಹಿಳೆ ಜನ್ಮ ನೀಡಿದ್ದಾಳೆ. ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ನಾಲ್ಕೂ ಮಕ್ಕಳು ಆರೋಗ್ಯವಾಗಿವೆ. ಆದ್ರೆ ತೂಕ ಕಡಿಮೆಯಿರುವ ಕಾರಣ ವಿಶೇಷ ಆರೈಕೆ ಮಾಡಲಾಗ್ತಿದೆ. ಈ ಬಗ್ಗೆ ಪ್ರೀತ್ ಆಸ್ಪತ್ರೆಯ ಡಾಕ್ಟರ್ ಜೆ.ಎಸ್. ಗ್ರೋವರ್ ಮಾಹಿತಿ ನೀಡಿದ್ದಾರೆ. ಒಂದುವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಯ್ತಂತೆ. ವಝೀರ್ಪುರ್ ನಿವಾಸಿ ಕುಲದೀಪ್ ಕೌರ್ ಗೆ ಮೂರು ತಿಂಗಳಿರುವಾಗಲೇ ನಾಲ್ಕು ಮಕ್ಕಳಿವೆ ಎಂಬುದು ತಿಳಿದಿತ್ತು. ಹಾಗಾಗಿ ಹೆಚ್ಚಿನ  ಕಾಳಜಿ ವಹಿಸಲಾಗಿತ್ತಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...