alex Certify
ಕನ್ನಡ ದುನಿಯಾ       Mobile App
       

Kannada Duniya

ತಮಿಳುನಾಡಿನಲ್ಲಿ ಮತ್ತೊಂದು ‘ಅಮ್ಮ’ ಯೋಜನೆ

tn-chief-minister

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ‘ಅಮ್ಮ’ ಹೆಸರಿನಲ್ಲಿ ಆರಂಭಿಸಿರುವ ಅನೇಕ ಯೋಜನೆಗಳು ಜನಪ್ರಿಯವಾಗಿವೆ. ‘ಅಮ್ಮ’ ಹೆಸರಿನ ಕ್ಯಾಂಟೀನ್, ಸಿಮೆಂಟ್, ಉಪ್ಪು ಸೇರಿದಂತೆ ಅನೇಕ ಯೋಜನೆಗಳು ಈಗಾಗಲೇ ಜನಪ್ರಿಯವಾಗಿವೆ.

ಈಗ ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿರುವ ಜಯಲಲಿತಾ, ‘ಅಮ್ಮ’ ಬ್ರಾಂಡ್ ನಲ್ಲಿ ಹೊಸ ಯೋಜನೆ ಪ್ರಕಟಿಸಿದ್ದಾರೆ. ‘ಅಮ್ಮ’ ಜಿಮ್ ಹಾಗೂ ಪಾರ್ಕ್ ಗಳನ್ನು ಆರಂಭಿಸಲು ಮುಂದಾಗಿದ್ದಾರೆ. ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ದೃಷ್ಠಿಯಿಂದ ತಮಿಳುನಾಡಿನ ಗ್ರಾಮಾಂತರ ಪ್ರದೇಶಗಳಲ್ಲಿ ‘ಅಮ್ಮ’ ಜಿಮ್ ಹಾಗೂ ಪಾರ್ಕ್ ಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಶೀಘ್ರವೇ ಕಾರ್ಯರೂಪಕ್ಕೆ ತರಲು ಯೋಜಿಸಲಾಗಿದೆ.

ಮೊದಲ ಹಂತದಲ್ಲಿ 100 ಕೋಟಿ ರೂಪಾಯಿ ವೆಚ್ಛದಲ್ಲಿ 500 ಜಿಮ್ ಹಾಗೂ ಪಾರ್ಕ್ ನಿರ್ಮಾಣ ಮಾಡಲಾಗುವುದು. ಪಾರ್ಕ್ ಗಳಲ್ಲಿ ಶುದ್ಧ ಕುಡಿಯುವ ನೀರು, ಆಟಿಕೆಗಳು, ಕೂರಲು ಬೆಂಚ್ ಮೊದಲಾದ ಸೌಲಭ್ಯಗಳಿರುತ್ತವೆ. ವ್ಯಾಯಾಮ ಮಾಡಲು ಅನುಕೂಲವಾಗುವಂತೆ ಜಿಮ್ ಗಳಲ್ಲಿ ಪರಿಕರ ಅಳವಡಿಸಲಾಗುವುದು ಎಂದು ಜಯಲಲಿತಾ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...