alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಮ್ಮ’ನ ದೇವಸ್ಥಾನಕ್ಕೆ ಶಿಲಾನ್ಯಾಸ !

464823-jayalalithaa-temple

ಇದಕ್ಕೆ ಅಭಿಮಾನದ ಅತಿರೇಕ ಅಂತೀರೋ ಅಥವಾ ಕೆಲಸ ಮಾಡಿದ್ದುದ್ದರ ಪ್ರತಿಫಲ ಅಂತೀರೋ ನಿಮಗೆ ಬಿಟ್ಟಿದ್ದು. ‘ಅಮ್ಮ’ ಹೆಸರಿನ ಬ್ರಾಂಡ್ ಮೂಲಕವೇ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರ ಹೆಸರಿನಲ್ಲಿ ದೇವಸ್ಥಾನವೊಂದನ್ನು ನಿರ್ಮಿಸಲು ವಕೀಲರೊಬ್ಬರು ಮುಂದಾಗಿದ್ದಾರೆ.

ಹೌದು. ವಿರುಗಂಬಕಂ ಕ್ಷೇತ್ರದ ಎಂಜಿಆರ್ ಪಕ್ಷದ ಯುವ ನಾಯಕ ವಕೀಲ ಎ.ಪಿ. ಶ್ರೀನಿವಾಸನ್ 2008 ರಲ್ಲಿ ತಾವು ಖರೀದಿಸಿದ ಭೂಮಿಯಲ್ಲಿ ಅಮ್ಮ ದೇಗುಲವನ್ನು ಕಟ್ಟಿಸುತ್ತಿದ್ದು, ಈಗಾಗಲೇ ವೆಲ್ಲೂರಿನ ಅಯ್ಯೆಪ್ಪೇಡು ಗ್ರಾಮದಲ್ಲಿ `ಅಮ್ಮ ಆಲಯಂ’ ಎಂಬ ಹೆಸರಿನ ದೇಗುಲಕ್ಕೆ ಶಿಲಾನ್ಯಾಸ ನೆರವೇರಿದೆ.

ವಿಶೇಷವೆಂದರೆ ಈ ವರ್ಷದ ಅಂತ್ಯದಲ್ಲಿ ಪೂರ್ಣಗೊಳ್ಳಲಿರುವ ಈ ದೇವಸ್ಥಾನದಲ್ಲಿ 6 ಅಡಿ ಉದ್ದದ ತಾಮ್ರದಿಂದ ಮಾಡಿದ ಜಯಲಲಿತಾರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ದೇವಸ್ಥಾನದ ಹೊರಗಡೆ ಸಿ.ಎನ್. ಅಣ್ಣಾದೊರೈ ಮತ್ತು ಎಂಜಿಆರ್ ಅವರ ಪ್ರತಿಮೆಗಳು ಸಹ ಇರಲಿವೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...