alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತಾಬ್ ಕುಟುಂಬಕ್ಕಾಗದ ಕೆಲಸವನ್ನು ಮಾಡಿ ಮುಗಿಸಿದ ಸಾಮಾನ್ಯ ಶಿಕ್ಷಕ

ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆ ಮತ್ತೆ ಸುದ್ದಿಯಲ್ಲಿದೆ. 2008ರಲ್ಲಿ ದೌಲತ್ ಪುರ ಗ್ರಾಮಕ್ಕೆ ಬಂದಿದ್ದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಅಲ್ಲೊಂದು ಪದವಿ ಕಾಲೇಜು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು. ಬಿಗ್ ಬಿ ಭರವಸೆ ಗ್ರಾಮಸ್ಥರಲ್ಲಿ ಕನಸಿನ ಬೀಜ ಬಿತ್ತಿತ್ತು. ಆದ್ರೆ ಅಮಿತಾಬ್ ಭರವಸೆ ಕೇವಲ ರೀಲ್ ಆಗಿಯೇ ಉಳೀತು.

2008ರಲ್ಲಿ ಗ್ರಾಮಕ್ಕೆ ಪತ್ನಿ ಜಯಾ ಬಚ್ಚನ್, ಮಗ ಅಭಿಷೇಕ್ ಬಚ್ಚನ್, ಪತ್ನಿ ಐಶ್ವರ್ಯ ರೈ ಬಚ್ಚನ್ ಜೊತೆ ಬಂದಿದ್ದ ಅಮಿತಾಬ್ ಬಚ್ಚನ್, ಪದವಿ ಕಾಲೇಜು ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಅದಕ್ಕಾಗಿ ಭೂಮಿ ಖರೀದಿ ಮಾಡಿರುವುದಾಗಿ ಘೋಷಣೆ ಮಾಡಿದ್ದರು. ಅದಕ್ಕೆ ಐಶ್ವರ್ಯ ರೈ ಬಚ್ಚನ್ ಗರ್ಲ್ಸ್ ಕಾಲೇಜ್ ಎಂದು ಹೆಸರೂ ಇಡಲಾಗಿತ್ತು. ಆದ್ರೆ ಕಾಲೇಜು ಕಟ್ಟಡ ಮಾತ್ರ ಈವರೆಗೂ ನಿರ್ಮಾಣವಾಗಿಲ್ಲ.

ಬಚ್ಚನ್ ನಂಬಿ ಕೂರದ ಗ್ರಾಮಸ್ಥರು ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಚಂದಾ ಸಂಗ್ರಹಿಸಿ ಗ್ರಾಮದಲ್ಲಿ ಕಾಲೇಜು ನಿರ್ಮಾಣಕ್ಕೆ ಮುಂದಾಗಿದ್ದಾರೆ. ಬಹುತೇಕ ಕಾಲೇಜು ನಿರ್ಮಾಣವಾಗಿದೆ. ಜುಲೈನಿಂದ ಪಾಠ ಶುರುವಾಗಲಿದೆಯಂತೆ. ವಿಶೇಷವೆಂದ್ರೆ ಬಚ್ಚನ್ ಖರೀದಿ ಮಾಡಿದ್ದ ಜಾಗದ ಪಕ್ಕದಲ್ಲಿಯೇ ಈ ಕಾಲೇಜು ನಿರ್ಮಾಣವಾಗ್ತಿದೆ.

ಕಾಲೇಜು ನಿರ್ಮಾಣದ ಹೊಣೆಯನ್ನು ಸತ್ಯವಾನ್ ಶುಕ್ಲಾ ಎಂಬ ಶಿಕ್ಷಕರೊಬ್ಬರು ಹೊತ್ತಿದ್ದಾರೆ. ಗ್ರಾಮಸ್ಥರ ಮನವೊಲಿಸಿ ಅವ್ರಿಂದ ಹಣ ಸಂಗ್ರಹಿಸಿ, ಭೂಮಿ ಹೊಂದಿಸಿ ಕಾಲೇಜು ನಿರ್ಮಾಣ ಮಾಡಿದ್ದಾರೆ. ಸತ್ಯವಾನ್ ಶುಕ್ಲಾ, ಕಾಲೇಜಿಗೆ ದೌಲತ್ ಪುರ ಡಿಗ್ರಿ ಕಾಲೇಜ್ ಎಂದು ಹೆಸರಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...