alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಿ’ ಭೇಟಿಗೆ ಬರ್ತಿದ್ದಾರೆ ರೈಲಿನ ಒಂದು ಬೋಗಿ ತುಂಬುವಷ್ಟು ರೈತರು…!

ಮಹಾರಾಷ್ಟ್ರದ ಬಳಿಕ, ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಉತ್ತರ ಪ್ರದೇಶ ರೈತರ ಸಾಲ ತೀರಿಸಲಿದ್ದಾರೆ. ಅಷ್ಟೇ ಅಲ್ಲ, ಬ್ಯಾಂಕಿನ ಪತ್ರವನ್ನು ಸ್ವತಃ ಕೆಲ ರೈತರನ್ನು ಭೇಟಿ ಮಾಡಿ ನೀಡಲಿದ್ದಾರೆ.

70 ಮಂದಿ ರೈತರು ಮುಂಬೈಗೆ ಬರಲು ಬಿಗ್ ಬಿ ವ್ಯವಸ್ಥೆ ಮಾಡಿಸಿದ್ದಾರೆ. ಅವರಿಗೆ ಬ್ಯಾಂಕ್ ಪತ್ರಗಳನ್ನು ನೀಡಲಿದ್ದಾರೆ. ಉತ್ತರ ಪ್ರದೇಶದ 1,398 ರೈತರ 4.05 ಕೋಟಿ ರೂ. ಮೊತ್ತದ ಸಾಲವನ್ನು ಅಮಿತಾಭ್ ಭರಿಸಿದ್ದಾರೆ. ಬ್ಯಾಂಕ್ ಆಫ್ ಇಂಡಿಯಾದಲ್ಲಿರುವ ಸಾಲಗಳನ್ನು ಒಂದೇ ಬಾರಿಗೆ ತೀರಿಸಿದ್ದಾರೆ.

ಒಂದು ರೈಲು ಬೋಗಿಯನ್ನು ಪೂರ್ತಿ ಬುಕ್ ಮಾಡಿಸಿ 70 ರೈತರನ್ನು ನ.26 ರಂದು ಮುಂಬೈನ ತಮ್ಮ ಕಚೇರಿಗೆ ಆಹ್ವಾನಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಮಹಾರಾಷ್ಟ್ರದ 350 ರೈತರ ಸಾಲ ತೀರಿಸಿದ್ದ ಅಮಿತಾಭ್, 44 ಮಂದಿ ಹುತಾತ್ಮ ಯೋಧರ ಕುಟುಂಬಗಳಿಗೂ ನೆರವಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...