alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಪಿಎಂ ಆದ್ಮೇಲೆ 16 ಸಾವಿರ ಪಟ್ಟು ಹೆಚ್ಚಾಯ್ತು ಶಾ ಮಗನ ಆದಾಯ

ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತ್ರ ಹಾಗೂ ಅಮಿತ್ ಶಾ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೇರುತ್ತಿದ್ದಂತೆ ಜೈ ಅಮಿತ್ ಶಾ ಕಂಪನಿ ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ. ಒಂದಲ್ಲ ಎರಡಲ್ಲ 16 ಸಾವಿರ ಪಟ್ಟು ಆದಾಯದಲ್ಲಿ ಹೆಚ್ಚಳವಾಗಿದೆ.

ಟೆಂಪಲ್ ಎಂಟರ್ಪ್ರೈಸ್ ಪ್ರೈ.ಲಿ. ಹೆಸರಿನ ಕಂಪನಿಯನ್ನು ಜೈ ಅಮಿತ್ ಶಾ ನಡೆಸುತ್ತಿದ್ದಾರೆ. ಟೆಂಪಲ್ ಎಂಟರ್ಪ್ರೈಸ್ ಪ್ರೈ.ಲಿಮಿಟೆಡ್ ಕಂಪನಿ ಬ್ಯಾಲೆನ್ಸ್ ಶೀಟ್ ನಲ್ಲಿ ಗಣನೀಯ ಬದಲಾವಣೆಯಾಗಿದೆ. 2013-2014 ರಲ್ಲಿ ಕಂಪನಿಯ ಆದಾಯದಲ್ಲಿ ಅಂತ ಮಹತ್ವದ ಬದಲಾವಣೆಯಾಗಿರಲಿಲ್ಲ. ಆದ್ರೆ ಆರು ಸಾವಿರದಿಂದ 7 ಸಾವಿರ ರೂಪಾಯಿ ಇರುತ್ತಿದ್ದ ಆದಾಯ ನರೇಂದ್ರ ಮೋದಿ ಪ್ರಧಾನಿಯಾಗ್ತಿದ್ದಂತೆ 50 ಸಾವಿರಕ್ಕೆ ಬಂದು ನಿಂತಿದೆ. 2014-2015ರಲ್ಲಿ ಕಂಪನಿ ಒಟ್ಟ ಆದಾಯ 50 ಸಾವಿರವಾದ್ರೆ 18 ಸಾವಿರಕ್ಕೂ ಹೆಚ್ಚು ಲಾಭವಾಗಿದೆ. 2016-2017ರ ವೇಳೆಗೆ ಇದ್ರ ಪ್ರಮಾಣ 80.5 ಕೋಟಿಗೆ ಏರಿಕೆಯಾಗಿದೆ.

ಈ ವಿಷ್ಯವನ್ನು ವೆಬ್ ಸೈಟ್ ಒಂದು ಬಹಿರಂಗಪಡಿಸಿದೆ. ಜೈ ಅಮಿತ್ ಶಾ ಕಂಪನಿ ವಿರುದ್ಧ ಕಾಂಗ್ರೆಸ್ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಂಪನಿಯಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ಕಿಡಿಕಾರಿದ್ದಾರೆ. ನೋಟು ನಿಷೇಧದ ನಂತ್ರ ಲಾಭವಾಗಿದ್ದು ಅಮಿತ್ ಶಾ ಪುತ್ರನಿಗೆ ಎಂದಿರುವ ರಾಹುಲ್ ಜೈ ಅಮಿತ್ ಎಂದು ಟ್ವಿಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...