alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಜಿ ಆಲಿ ದರ್ಗಾ ಪ್ರವೇಶಿಸಿದ ತೃಪ್ತಿ ದೇಸಾಯಿ

trupti-desai_6ಮಹಿಳೆಯರ ಪ್ರವೇಶಕ್ಕೆ ನಿಷೇಧವಿರುವ ದೇವಾಲಯ ಹಾಗೂ ಮಸೀದಿಗಳಲ್ಲಿ ಮಹಿಳೆಯರಿಗೂ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ಮುಂಬೈನ ಹಾಜಿ ಆಲಿ ದರ್ಗಾ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಭೂಮಾತಾ ಬ್ರಿಗೇಡ್ ನ ಕೆಲ ಸದಸ್ಯೆಯರೊಂದಿಗೆ ಪೊಲೀಸರ ಬೆಂಗಾವಲಿನಲ್ಲಿ ದಕ್ಷಿಣ ಮುಂಬೈನಲ್ಲಿರುವ ಹಾಜಿ ಆಲಿ ದರ್ಗಾ ಪ್ರವೇಶಿಸಿದ ತೃಪ್ತಿ ದೇಸಾಯಿ ಪ್ರಾರ್ಥನೆ ಸಲ್ಲಿಸಿದರು.

ಈ ಹಿಂದೆ ತೃಪ್ತಿ ದೇಸಾಯಿ ದರ್ಗಾ ಪ್ರವೇಶಿಸಲು ಯತ್ನಿಸಿದ ವೇಳೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತಲ್ಲದೇ ಅವರ ಮೇಲೆ ಹಲ್ಲೆ ಯತ್ನವೂ ನಡೆದಿತ್ತು. ಯಾರಿಗೂ ಮಾಹಿತಿ ನೀಡದೆ ಇಂದು ದರ್ಗಾ ಪ್ರವೇಶಿಸಿರುವ ತೃಪ್ತಿ ದೇಸಾಯಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮುಂದಿನ ದಿನಗಳಲ್ಲಿ ದರ್ಗಾದಲ್ಲಿ ಮಹಿಳೆಯರಿಗೂ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವ ವಿಶ್ವಾಸವಿದೆ ಎಂದರು. ಮಹಿಳೆಯರ ಪ್ರವೇಶಕ್ಕೆ ನಿಷೇಧವಿದ್ದ ಶನಿಸಿಂಗ್ಣಾಪುರ ದೇವಾಲಯಕ್ಕೂ ತೃಪ್ತಿ ದೇಸಾಯಿ ವಿರೋಧದ ನಡುವೆಯೂ ಈ ಹಿಂದೆ ಪ್ರವೇಶಿಸಿದ್ದು, ಬಳಿಕ ಅಲ್ಲಿ ಎಲ್ಲ ಮಹಿಳೆಯರಿಗೂ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...