alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹದ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ದೇವರ ನಾಡು ಕೇರಳ ವರುಣನ ಆರ್ಭಟಕ್ಕೆ ಅಕ್ಷರಶಃ ತತ್ತರಿಸಿ ಹೋಗಿದೆ. ಬಡವ ಬಲ್ಲಿದನೆಂಬ ಭೇದವಿಲ್ಲದೆ ಬಹುತೇಕರು ಪ್ರಕೃತಿ ಮುನಿಸಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದರ ನಡುವೆಯೂ ತಮ್ಮ ನೋವುಗಳನ್ನು ಮರೆತು ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುತ್ತಿರುವ ಮಾನವೀಯ ಕಾರ್ಯಗಳು ನಡೆಯುತ್ತಿವೆ. ಇಂತಹುದೇ ಘಟನೆಯೊಂದರ ವರದಿ ಇಲ್ಲಿದೆ.

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಈ ಮೊದಲೇ ನಿಗದಿಯಾಗಿದ್ದ ವಿವಾಹ ಒಂದು ಪ್ರವಾಹದ ಕಾರಣಕ್ಕಾಗಿ ಮುಂದೂಡುವ ಹಂತಕ್ಕೆ ಬಂದಿತ್ತು. ಅದರಲ್ಲೂ ವಧು-ವರರ ಮನೆ ಸಹ ನೀರಿನಲ್ಲಿ ಮುಳುಗಿತ್ತು.

ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ನೆರವಿಗೆ ಧಾವಿಸಿದ ಸ್ಥಳೀಯರು, ವಿವಾಹವನ್ನು ನಿಗದಿತ ಸಮಯದಂತೆ ದೇವಾಲಯವೊಂದರಲ್ಲಿ ನೆರವೇರಿಸಿದ್ದಾರೆ. ಜೊತೆಗೆ ಆಶ್ರಯ ತಾಣದಲ್ಲಿ ವಿವಾಹ ಸಮಾರಂಭಕ್ಕೆ ಆಗಮಿಸಿದವರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...