alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹದಲ್ಲಿ ಕೊಚ್ಚಿ ಹೋಯ್ತು ನಾಲ್ವರನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್

flood-affected-area-in-ranchi_fdfef534-71d3-11e7-a83f-2f06dfe08b4c

ಜಾರ್ಖಂಡ್ ನ ಕೋಯೆಲ್ ನದಿಯ ಪ್ರವಾಹದಲ್ಲಿ ಆ್ಯಂಬ್ಯುಲೆನ್ಸ್ ಒಂದು ಕೊಚ್ಚಿ ಹೋಗಿದೆ. ಅದರಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 6 ಮಂದಿ ಪ್ರಯಾಣಿಸ್ತಾ ಇದ್ರು. ಎಲ್ಲರೂ ನೀರುಪಾಲಾಗಿದ್ದಾರೆ. ಅವರಲ್ಲಿ ಒಬ್ಬರು ಪಾರ್ಶ್ವವಾಯುವಿಗೆ ತುತ್ತಾದ ಶಿಕ್ಷಕ ಕೂಡ ಇದ್ರು.

ಅವರ ಕುಟುಂಬದ ಓರ್ವ ಸದಸ್ಯ ಹಾಗೂ ಆಂಬ್ಯುಲೆನ್ಸ್ ಚಾಲಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಈ ಆಂಬ್ಯುಲೆನ್ಸ್ ಚೈನ್ಪುರದಿಂದ ರಾಂಚಿಗೆ ಹೊರಟಿತ್ತು. ಬೆಳಗಿನ ಜಾವ ಸಿಥೋಯಾ ಸೇತುವೆ ಮೇಲೆ ಸಂಚರಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಸೇತುವೆ ಮೇಲೆ ಭಾರೀ ಪ್ರಮಾಣದಲ್ಲಿ ನೀರು ನಿಂತಿತ್ತು. ಅದೇ ಜಾಗದಲ್ಲಿ ಆಂಬ್ಯುಲೆನ್ಸ್ ಕೂಡ ಕೆಟ್ಟು ನಿಂತಿತ್ತು. ಚಾಲಕ ಹಾಗೂ ಮೃತರ ಕುಟುಂಬದ ಒಬ್ಬ ಸದಸ್ಯ ಕೆಳಕ್ಕಿಳಿದು ಆಂಬ್ಯುಲೆನ್ಸ್ ಅನ್ನು ಮುಂದಕ್ಕೆ ತಳ್ಳಲು ಯುತ್ನಿಸಿದ್ದಾರೆ. ಈ ವೇಳೆ ನೀರಿನ ಸೆಳೆತ ಜಾಸ್ತಿಯಾಗಿ ಆಂಬ್ಯುಲೆನ್ಸ್ ಕೊಚ್ಚಿ ಹೋಗಿದೆ.

ಓರ್ವನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ, ಆದ್ರೆ ಆಂಬ್ಯುಲೆನ್ಸ್ ನಲ್ಲಿದ್ದವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಚಾಲಕ ಪರಾರಿಯಾಗಿದ್ದು, ಮೃತರಲ್ಲಿ ಇಬ್ಬರು ಮಹಿಳೆಯರು ಕೂಡ ಇದ್ದಾರೆ. ರೋಗಿಯ ಕುಟುಂಬದವರು ಒತ್ತಾಯಿಸಿದ್ರಿಂದ, ಪ್ರವಾಹದಿಂದಾವೃತವಾದ ಸೇತುವೆ ಮೇಲೆ ಆಂಬ್ಯುಲೆನ್ಸ್ ಚಲಾಯಿಸಲು ಚಾಲಕ ಒಪ್ಪಿಕೊಂಡಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...