alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರಿಗೆ ಇಷ್ಟವಾಗುವ ಭಾರತದ ʼಅದ್ಭುತʼ ಬೀಚ್ ಗಳಿವು

ಭಾರತ, ಪ್ರಕೃತಿ ಸೌಂದರ್ಯದ ನೆಲೆವೀಡು. ಇಲ್ಲಿನ ನಿಸರ್ಗ ರಮಣೀಯತೆಗೆ ಸೋಲದವರೇ ಇಲ್ಲ. ಸಮುದ್ರ ಕಿನಾರೆಗಳಂತೂ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳು. ಪಾರ್ಟಿ ಮೂಡ್ ಗೆ ಬೆಸ್ಟ್ ಅಂದ್ರೆ ಬೀಚ್ ಗಳು. ಹಾಗಾದ್ರೆ ಭಾರತದಲ್ಲಿರುವ ಅದ್ಭುತ ಬೀಚ್ ಗಳು ಯಾವುದು ಅನ್ನೋದನ್ನು ನೋಡೋಣ.

ಕೋವಲಂ ಬೀಚ್, ಕೇರಳ : ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡೋದು ಕೇರಳದ ಕೋವಲಂ ಬೀಚ್ ಗೆ. ಕಡಲ ಕಿನಾರೆ ಸುತ್ತ ನಡೀತಾ ಇದ್ರೆ ಅದರ ಮಜಾನೇ ಬೇರೆ. ಸನ್ ಬಾತ್, ಸರ್ಫಿಂಗ್, ಬೀಚ್ ವಾಲಿಬಾಲ್, ಈಜು ಎಲ್ಲದಕ್ಕೂ ಇದು ಹೇಳಿ ಮಾಡಿಸಿದಂತಿದೆ. ಕೋವಲಂ ಬೀಚ್ ನಲ್ಲಿ ಸಖತ್ತಾಗಿ ಎಂಜಾಯ್ ಮಾಡಬಹುದು. ಇಲ್ಲಿ ಅತ್ಯಂತ ರುಚಿಕರವಾದ ಸೀ ಫುಡ್ ಸಿಗುತ್ತೆ, ಆಯುರ್ವೇದಿಕ್ ಮಸಾಜ್, ಬೀಚ್ ಬದಿಯಲ್ಲಿ ಸ್ಪಾ ಎಲ್ಲವೂ ಇದೆ. ಟೊಪ್ಪಿ, ಸ್ವಿಮ್ ಸೂಟ್, ಬೀಚ್ ನಲ್ಲಿ ಧರಿಸುವಂತಹ ಉಡುಗೆ ಕೂಡ ಇಲ್ಲಿದೆ.

ಪಾಲೊಲೆಮ್ ಬೀಚ್, ಗೋವಾ : ಬೀಚ್ ನಲ್ಲಿ ಆರಾಮಾಗಿ ಮಲಗಬಹುದು, ಅರೇಬಿಯನ್ ಸಮುದ್ರದಲ್ಲಿ ಈಜು ಹೊಡೆಯಬಹುದು. ಯೋಗ ತರಬೇತಿ ಪಡೆಯಬಹುದು, ಭಾರತೀಯ ಸಾಂಪ್ರದಾಯಿಕ ಆಹಾರವನ್ನು ಟೇಸ್ಟ್ ಮಾಡುವ ಅವಕಾಶವೂ ಇದೆ. ಡಾಲ್ಫಿನ್ ಗಳ ಹುಡುಕಾಟಕ್ಕಾಗಿ ಸಮುದ್ರಕ್ಕೆ ಇಳಿಯಬಹುದು. ಇಲ್ಲಿ ಡಿಸ್ಕೋ ಇದೆ, ಸಾಹಸವಿದೆ, ಆಯುರ್ವೇದಿಕ್ ಮಸಾಜ್ ಮಾಡಿಸಿಕೊಳ್ಳಬಹುದು. ವನ್ಯಜೀವಿ ಅಭಯಾರಣ್ಯವನ್ನೂ ನೋಡಬಹುದು.

ಬಾಗಾ ಬೀಚ್, ಗೋವಾ : ನಿಮಗೆ ಪಾರ್ಟಿ ಮಾಡುವ ಹುಚ್ಚಿದ್ರೆ, ಡಾನ್ಸ್ ಇಷ್ಟ ಅಂತಾದ್ರೆ ಬಾಗಾ ಬೀಚ್ ಹೇಳಿ ಮಾಡಿಸಿದಂತಹ ಜಾಗ. ಇಲ್ಲಿ ಡಾಲ್ಫಿನ್ ಗಳ ವೀಕ್ಷಣೆಗೆ ಅವಕಾಶವಿದೆ, ಬಾರ್, ಕ್ಲಬ್, ವಾಟರ್ ಸ್ಪೋರ್ಟ್ಸ್ ಎಲ್ಲವೂ ಇದೆ.

ವರ್ಕಳ ಬೀಚ್, ಕೇರಳ : ಬೀಚ್ ರೆಸ್ಟೋರೆಂಟ್ ಗಳಲ್ಲಿ ಸುಂದರ ಸಂಜೆಯನ್ನು ಎಂಜಾಯ್ ಮಾಡಿ. ಏಕಾಂಗಿಯಾಗಿ ಪ್ರವಾಸ ಮಾಡಲು ಇಚ್ಛಿಸುವವರಿಗೆಲ್ಲ ಇಲ್ಲಿ ಶಾಂತಿ, ನೆಮ್ಮದಿ ಸಿಗುತ್ತದೆ. ಪರಿಶುದ್ಧ ನೀರು, ಸುಂದರವಾದ ಬೀಚ್. ಬೀಚ್ ನುದ್ದಕ್ಕೂ ನೀವೊಂದು ಲಾಂಗ್ ವಾಕ್ ಹೋಗಿ ಬರಬಹುದು. ಕೇರಳದ ವಿಶಿಷ್ಟ ಕಲಾಕೃತಿಗಳು ಕೂಡ ಇಲ್ಲಿ ಸಿಗುತ್ತವೆ.

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...