alex Certify
ಕನ್ನಡ ದುನಿಯಾ       Mobile App
       

Kannada Duniya

ಅಮರನಾಥ ಯಾತ್ರೆ ಮಾಲಿನ್ಯದ ಬಗ್ಗೆ NGT ಪ್ರಶ್ನೆ

ವೈಷ್ಣೋದೇವಿ ನಂತ್ರ ರಾಷ್ಟ್ರೀಯ ಗ್ರೀನ್ ಟ್ರಿಬ್ಯೂನಲ್ (ಎನ್ಜಿಟಿ) ಅಮರನಾಥ ಯಾತ್ರೆಯತ್ತ ಚಿತ್ತ ಹರಿಸಿದೆ. ಅಮರನಾಥ ಯಾತ್ರೆಯಲ್ಲಿ ಸಿಗ್ತಿರುವ ಸೌಲಭ್ಯ ಹಾಗೂ ಮಾಲಿನ್ಯದ ಬಗ್ಗೆ ಗಮನ ನೀಡಿದೆ. ಅಮರನಾಥ ಯಾತ್ರೆ ಆಯೋಜನೆ ಮಾಡುವ ಅಮರನಾಥ ಶ್ರೈನ್ ಬೋರ್ಡ್ ಗೆ ಎನ್ಜಿಟಿ ಪ್ರಶ್ನೆ ಮಾಡಿದೆ. 2012ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಏಕೆ ಪಾಲಿಸುತ್ತಿಲ್ಲ ಎಂದು ಕೇಳಿದೆ.

ಬುಧವಾರ ಅಮರನಾಥ ಯಾತ್ರೆ ವೇಳೆ ಭಕ್ತರಿಗೆ ಸಿಗುವ ಸೌಲಭ್ಯ, ಪವಿತ್ರ ಗುಹೆಯ ಸ್ವಚ್ಛತೆ, ಶ್ರೈನ್ ಬೋರ್ಡ್ ತೆಗೆದುಕೊಳ್ಳುತ್ತಿರುವ ಕ್ರಮವನ್ನು ಖಂಡಿಸಿದೆ. ಗುಹೆ ಬಳಿಯ ಪ್ರದೇಶವನ್ನು ಶಾಂತವಲಯವೆಂದು ಘೋಷಣೆ ಮಾಡುವಂತೆ ಎನ್ಜಿಟಿ ಸೂಚಿಸಿದೆ.

ಇದೇ ವೇಳೆ ಗುಹೆ ಬಳಿ ತೆಂಗಿನಕಾಯಿ ಎಸೆಯುವುದನ್ನು ಎನ್ಜಿಟಿ ಪ್ರಶ್ನೆ ಮಾಡಿದೆ. ಗುಹೆ ಬಳಿ ವಿಸ್ತರಿಸುತ್ತಿರುವ ಅಂಗಡಿ ಹಾಗೂ ಶೌಚಾಲಯ ತೆರವಿನ ಬಗ್ಗೆಯೂ ಪ್ರಶ್ನೆ ಮಾಡಿದೆ. ಸ್ವಚ್ಛತೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ಕಮಿಟಿಯೊಂದನ್ನು ಎನ್ಜಿಟಿ ರಚಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...