alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಸಚಿವ ಹೇಳಿದ್ದೇನು?

'Am A VIP,' Says Odisha Minister After Security Officer Straps His Sandalsಒಡಿಶಾದಲ್ಲೊಂದು ನಾಚಿಕೆಗೇಡಿನ ಘಟನೆ ನಡೆದಿದೆ. ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವರೊಬ್ಬರು ಸಾರ್ವಜನಿಕರ ಸಮ್ಮುಖದಲ್ಲೇ ತಮ್ಮ ಅಂಗರಕ್ಷಕನಿಂದ ಶೂ ಹಾಕಿಸಿಕೊಂಡಿರುವುದಲ್ಲದೇ ಈ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ‘ನಾನು ವಿಐಪಿ’ ಎಂಬ ಉದ್ದಟತನದ ಮಾತುಗಳನ್ನಾಡಿದ್ದಾರೆ.

ಸೋಮವಾರದಂದು ಕಿಯೋನ್ಜಾರ್ ನಲ್ಲಿ ನಡೆದ 70 ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ಜೋಗೇಂದ್ರ ಬೆಹ್ರಾ, ಧ್ವಜಾರೋಹಣದ ವೇಳೆ ತಮ್ಮ ಷೂ ಗಳನ್ನು ಕಳಚಿ ಧ್ವಜಾರೋಹಣ ನೆರವೇರಿಸಿದ್ದರು. ಬಳಿಕ ಅವರ ಅಂಗರಕ್ಷಕ ಬಾಗಿ ಸಚಿವರಿಗೆ ಶೂ ಹಾಕಿದ್ದಾರೆ. ಇದು ಸಾರ್ವಜನಿಕರ ಸಮ್ಮುಖದಲ್ಲೇ ನಡೆದಿದೆ.

ಇದರ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬೋಗೇಂದ್ರ ಬೆಹ್ರಾ, ನಾನು ವಿಐಪಿ. ಹಾಗಾಗಿ ಧ್ವಜಾರೋಹಣ ಮಾಡಿದ್ದೇನೆ. ಇದನ್ನು ನನ್ನ ಅಂಗರಕ್ಷಕ ಮಾಡಲು ಸಾಧ್ಯವೇ ಎಂಬ ಮಾತುಗಳನ್ನಾಡಿದ್ದಾರೆ. ಪ್ರತಿಪಕ್ಷಗಳು ಬೋಗೇಂದ್ರ ಬೆಹ್ರಾರ ಸಾರ್ವಜನಿಕ ನಡವಳಿಕೆಯನ್ನು ಟೀಕಿಸಿವೆ. ಈ ಮಧ್ಯೆ ಮತ್ತೊಬ್ಬ ಸಚಿವ ಸೂರ್ಯನಾರಾಯಣ ಪಾತ್ರ, ಬೋಗೇಂದ್ರ ಬೆಹ್ರಾರನ್ನು ಸಮರ್ಥಿಸಿಕೊಂಡಿದ್ದು, ಪ್ರತಿಪಕ್ಷಗಳು ಅವರ ವಯಸ್ಸನ್ನು ಪರಿಗಣಿಸಬೇಕು. ಅವರಿಗೆ ಬಾಗಲು ಸಾಧ್ಯವಾಗದಿರುವ ಕಾರಣ ಅಂಗರಕ್ಷಕ ಶೂ ಹಾಕಿರಬಹುದೆಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...