alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣೆಗೂ ಮೊದಲೇ ಹಿಂದೂ ಸೇನಾದಿಂದ ಟ್ರಂಪ್ ವಿಜಯೋತ್ಸವ

hindu-sena

ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುವ ಮೊದಲೇ ಹಿಂದೂ ಸೇನಾ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಅವರ ವಿಜಯೋತ್ಸವ ಆಚರಿಸಿದೆ. ಅಮೆರಿಕಕ್ಕೆ ವಲಸೆ ಹೋಗಿರುವ ಭಾರತೀಯರೊಂದಿಗೆ ಟ್ರಂಪ್ ಸ್ನೇಹದಿಂದಿದ್ದಾರೆ. ಜೊತೆಗೆ ಉಗ್ರವಾದ ಪೀಡಿತ ರಾಷ್ಟ್ರಗಳ ಮುಸಲ್ಮಾನರ ವಲಸೆ ನಿಷೇಧಿಸುವ ವಿಚಾರ ಬೆಂಬಲಿಸಿರುವುದರಿಂದ ಹಿಂದೂ ಸೇನಾ, ಟ್ರಂಪ್ ಗೆ ಜೈ ಎಂದಿದೆ.

ದೆಹಲಿಯ ಜಂತರ್ ಮಂತರ್ ನಲ್ಲಿ ಜಮಾಯಿಸಿದ ಹಿಂದೂ ಸೇನಾ ಕಾರ್ಯಕರ್ತರು, ಡ್ರಮ್- ಡೋಲು ಬಾರಿಸುವ ಮೂಲಕ ಟ್ರಂಪ್ ವಿಜಯಿ ಅಂತಾ ಸಂಭ್ರಮಿಸಿದ್ರು. ಮುಸ್ಲಿಂ ಭಯೋತ್ಪಾದನೆ ವಿರುದ್ಧದ ಅವರ ನಿಲುವು, ಭಾರತ ಹಾಗೂ ಹಿಂದುಗಳ ಬಗ್ಗೆ ಇರುವ ಪ್ರೀತಿಯಿಂದಾಗಿ ಟ್ರಂಪ್ ಗೆಲುವು ಚುನಾವಣೆಗೂ ಮುನ್ನವೇ ಖಚಿತವಾಗಿದೆ ಅಂತಾ ಹಿಂದೂ ಸೇನಾ ಅಭಿಪ್ರಾಯಪಟ್ಟಿದೆ. ಕಳೆದ ತಿಂಗಳು ನ್ಯೂಜೆರ್ಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಂಪ್ ‘ಐ ಲವ್ ಹಿಂದೂ’ ಅಂತಾ ಹೇಳಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...