alex Certify
ಕನ್ನಡ ದುನಿಯಾ       Mobile App
       

Kannada Duniya

ಕುದುರೆಯ ಕಾಲು ಮುರಿದ ಬಿಜೆಪಿ ನಾಯಕ

police-horse-attacked

ಸರ್ಕಾರದ ವಿರುದ್ದದ ಪ್ರತಿಭಟನೆ ಸಂದರ್ಭದಲ್ಲಿ ಬಿಜೆಪಿ ನಾಯಕರೊಬ್ಬರು ಪೊಲೀಸ್ ಕುದುರೆ ಮೇಲೆ ತಮ್ಮ ಸಿಟ್ಟು ತೋರಿಸಿಕೊಂಡಿದ್ದಾರೆ. ಬಡಪಾಯಿ ಕುದುರೆಯ ಕಾಲು ಮುರಿದಿದ್ದಾರೆ.

ಕಾಂಗ್ರೆಸ್ ನೇತೃತ್ವದ ಉತ್ತರಾಖಂಡ್ ಸರ್ಕಾರ ಅನುದಾನ ಬಳಕೆಯಲ್ಲಿ ಭ್ರಷ್ಟಾಚಾರವೆಸಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಡೆಹ್ರಾಡೂನ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಬಿಜೆಪಿ ನಾಯಕರೊಬ್ಬರು ತಮ್ಮಲ್ಲಿದ್ದ ಕೋಲಿನಿಂದ ಪೊಲೀಸ್ ಕುದುರೆಯ ಕಾಲಿಗೆ ಹೊಡೆದಿದ್ದು, ಇದರಿಂದ ಕುದುರೆಯ ಕಾಲು ಮುರಿದಿದೆ. ಇದನ್ನು ರೆಕಾರ್ಡ್ ಮಾಡಿಕೊಂಡವರೊಬ್ಬರು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದು, ಬಿಜೆಪಿ ನಾಯಕನ ವರ್ತನೆಗೆ ಪ್ರಾಣಿ ಪ್ರಿಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...