alex Certify
ಕನ್ನಡ ದುನಿಯಾ       Mobile App
       

Kannada Duniya

ಅಲಹಾಬಾದ್ ಶೀಘ್ರದಲ್ಲಿಯೇ ಪ್ರಯಾಗ್ ರಾಜ್…!

ಲಕ್ನೋ: ಅಲಹಾಬಾದ್ ಜಿಲ್ಲೆಯ ಹೆಸರು ಶೀಘ್ರವೇ ಪ್ರಯಾಗ್ ರಾಜ್ ಎಂದು ಬದಲಾಗಲಿದೆಯಂತೆ. ಹೀಗೆಂದು ಹೇಳಿದವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್.

ಅಲಹಾಬಾದ್ ಜಿಲ್ಲೆಯನ್ನು ಪ್ರಯಾಗ್ ರಾಜ್ ಎಂದು ಬದಲಾಯಿಸುವಂತೆ ಯೋಗಿ ಆದಿತ್ಯನಾಥ್ ಅವರಿಗೆ ಅಖಾಡ ಪರಿಷದ್ ಹಾಗೂ ಇತರರು ಪ್ರಸ್ತಾವನೆ ಸಲ್ಲಿಸಿದ್ದಾರಂತೆ. ಇದಕ್ಕೆ ರಾಜ್ಯಪಾಲ ರಾಮ್ ನಾಯಕ್ ಕೂಡ ಒಪ್ಪಿಗೆ ಸೂಚಿಸಿದ್ದಾರಂತೆ.

ಶೀಘ್ರವೇ ಅಲಹಾಬಾದ್ ಜಿಲ್ಲೆ ಪ್ರಯಾಗ್ ರಾಜ್ ಎಂದು ಬದಲಾಗುವುದು ಎಂದು ಮುಂದಿನ ವರ್ಷ ನಡೆಯಲಿರುವ ಮಹಾ ಕುಂಭ ಮೇಳದ ಚರ್ಚೆಯಲ್ಲಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಇನ್ನು ಕುಂಭ ಮೇಳಕ್ಕಾಗಿ ಬರುವ ಭಕ್ತರಿಗಾಗಿ ಹಾಲಿನ ಬೂತ್ ಗಳು, ಎಟಿಎಂ ಮೆಷಿನ್ ಗಳು, ನೀರಿನ ಟ್ಯಾಂಕರ್ ಗಳು, ಬ್ಯಾಂಕ್ ಗಳು, ಮೊಬೈಲ್ ಟವರ್ ಗಳ ವ್ಯವಸ್ಥೆಯನ್ನು ಮಾಡಲಾಗುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...