alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಘ ಮೇಳದ ಮೊದಲ ಸ್ನಾನ ಶುರು

mela

ಹುಣ್ಣಿಮೆಯಾದ ಇಂದು ಅಲಹಾಬಾದ್ ನಲ್ಲಿ ಮಾಘ ಮೇಳ ಶುರುವಾಗಿದೆ. ಪುಣ್ಯ ಸ್ನಾನ ಮಾಡಲು ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಭಕ್ತರು ಸಂಗಮ ತಲುಪಿದ್ದಾರೆ.

ಬುಧವಾರ ಸಂಜೆ 7 ಗಂಟೆ ನಂತ್ರ ಶುಭ ಮುಹೂರ್ತವಿದ್ದಿದ್ದರಿಂದ ಅಲ್ಲಿಂದ ಇಲ್ಲಿಯವರೆಗೆ 2 ಲಕ್ಷಕ್ಕೂ ಹೆಚ್ಚು ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ. ಒಂದು ತಿಂಗಳುಗಳ ಕಾಲ ನಡೆಯುವ ಕಲ್ಪವಾಸ ಕೂಡ ಇಂದು ಶುರುವಾಗಿದೆ. ಇದ್ರ ಪ್ರಕಾರ ಒಂದು ದಿನದಿಂದ ಹಿಡಿದು ಒಂದು ತಿಂಗಳವರೆಗೆ ಭಕ್ತರು ಸಂಗಮ ತಟದಲ್ಲಿ ಏಕಾಂತ ವಾಸ ಮಾಡಲಿದ್ದಾರೆ. ಅಲ್ಲದೆ ಮೋಕ್ಷಕ್ಕಾಗಿ ಪ್ರಾರ್ಥನೆ ಮಾಡಲಿದ್ದಾರೆ.

ಕಲ್ಪವಾಸದ ಸಂಕಲ್ಪದ ನಂತ್ರ ಭಕ್ತರು ಸ್ನಾನ, ಅನ್ನ-ನೀರಿನ ದಾನದ ನಂತ್ರ ದಿನಕ್ಕೊಮ್ಮೆ ಮಾತ್ರ ಆಹಾರ ಸೇವನೆ ಮಾಡಲಿದ್ದಾರೆ. ನೆಲದ ಮೇಲೆ ನಿದ್ರಿಸಲಿದ್ದಾರೆ. ಸಂಗಮದಲ್ಲಿ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸ್ ಜೊತೆಗೆ ಅರೆ ಸೇನಾ ತುಕಡಿ ಸ್ಥಳದಲ್ಲಿದ್ದು, ಡ್ರೋನ್ ಕ್ಯಾಮರಾವನ್ನು ಸುರಕ್ಷತೆಗೆ ಬಳಸಲಾಗಿದೆ.

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...