alex Certify
ಕನ್ನಡ ದುನಿಯಾ       Mobile App
       

Kannada Duniya

1999 ರೂ. ಗೆ ಸಿಗ್ತಿರೋ ರಿಲಾಯನ್ಸ್ ಜಿಯೋಫೈ ಬಳಕೆ ಹೇಗೆ ಗೊತ್ತಾ?

531910-jiofio

ಭಾರತದ ಟೆಲಿಕಾಮ್ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಚಲನ ಮೂಡಿಸಿರುವ ರಿಲಾಯನ್ಸ್ ಜಿಯೋ ಈಗ ಎಲ್ಲರ ಅಚ್ಚುಮೆಚ್ಚು. ಸಾಕಷ್ಟು ಉಚಿತ ಆಫರ್ ಗಳಿರುವ ಈ ಸಿಮ್ ಸಿಗಲಿಲ್ಲ ಅಂತಾ ಸಾಕಷ್ಟು ಮಂದಿ ನಿರಾಸೆಗೊಂಡಿದ್ದಾರೆ. ರಿಲಾಯನ್ಸ್ ಮುಂದೆ ನಿಂತು ನಿಂತು ಸುಸ್ತಾಗಿ ಮನೆಗೆ ಬಂದವರೂ ಇದ್ದಾರೆ. ಆದ್ರೆ ಸಿಮ್ ಸಿಗಲಿಲ್ಲ ಅಂತಾ ಬೇಸರ ಬೇಡ. ಯಾಕೆಂದ್ರೆ ರಿಲಾಯನ್ಸ್ ಜಿಯೋಫೈ ನಿಮ್ಮ ಸೇವೆಗೆ ಸಿದ್ಧವಾಗಿ ನಿಂತಿದೆ.

ರಿಲಾಯನ್ಸ್ ಗ್ರಾಹಕರಿಗೆ ಹೊಸ ಆಫರ್ ನೀಡಿದೆ. ಜಿಯೋ ಸಿಮ್ ನಂತ್ರ ಜಿಯೋಫೈ ಸೌಲಭ್ಯವನ್ನು ಗ್ರಾಹಕರಿಗೆ ನೀಡ್ತಾ ಇದೆ. ಜಿಯೋ ವೆಲ್ ಕಂ ಆಫರನ್ನು ಗ್ರಾಹಕ ಡಿಸೆಂಬರ್ 31 ರವರೆಗೆ ಎಂಜಾಯ್ ಮಾಡಬಹುದಾಗಿದೆ. ಜಿಯೋಫೈ ಸಾಧನ 1999 ರೂಪಾಯಿಗೆ ಗ್ರಾಹಕನ ಕೈಗೆ ಸಿಗಲಿದೆ.

ಜಿಯೋಫೈ ಅಂದ್ರೇನು?

ಜಿಯೋಫೈ ಸಾಧನವನ್ನು ಒಮ್ಮೆಲೆ ಅನೇಕ ಬಳಕೆದಾರರು ಬಳಸಬಹುದಾಗಿದೆ. 4ಜಿ ವೇಗದಲ್ಲಿ ಮೊಬೈಲ್ ಗೂ ಉಚಿತ ಇಂಟರ್ ನೆಟ್ ಸೌಲಭ್ಯವನ್ನು ಇದು ನೀಡಲಿದೆ. ವೈಯಕ್ತಿಕ ವೈಫೈ ಆಗಿ ಇದನ್ನು ಬಳಸಬಹುದು. ಜಿಯೋಫೈ ಸಾಧನ ಒಮ್ಮೆ ಕನಿಷ್ಠ 10 ಸಾಧನಗಳಿಗೆ ಹಾಗೂ 1 ಯುಎಸ್ ಬಿ ಗೆ ಸಂಪರ್ಕ ಕಲ್ಪಿಸುವ ಸಾಮರ್ಥ್ಯ ಹೊಂದಿದೆ.

ಜಿಯೋಫೈ ಸಾಧನಕ್ಕೂ ಜಿಯೋ ವೆಲ್ ಕಂ ಆಫರ್ ಗೂ ಏನು ಸಂಬಂಧ?

ಜಿಯೋಫೈ ಸಾಧನವನ್ನು ಖರೀದಿ ಮಾಡಿದ್ರಿ ಎಂದಾದ್ರೆ ನೀವು ಜಿಯೋ ವೆಲ್ ಕಂ ಆಫರ್ ಪಡೆದಂತೆ. ಇದ್ರಲ್ಲಿ ಅನಿಯಮಿತ ಹೈ ಸ್ಪೀಡ್ ಡೇಟಾ, ಹೆಚ್ ಡಿ ವಾಯ್ಸ್, ಎಸ್ ಎಂ ಎಸ್ ಪಡೆಯಬಹುದಾಗಿದೆ. ಡಿಸೆಂಬರ್ 31ರವರೆಗೆ ಗ್ರಾಹಕ ಈ ಸೌಲಭ್ಯ ಪಡೆಯಬಹುದಾಗಿದೆ. ಅನುಕೂಲಕ್ಕೆ ತಕ್ಕಂತೆ ಗ್ರಾಹಕ ಪ್ರೀಪೇಡ್ ಅಥವಾ ಪೋಸ್ಟ್ ಪೇಡ್ ಸಿಮ್ ಪಡೆಯಬಹುದಾಗಿದೆ.

LYF ಚಾಲಿತ ಜಿಯೋಫೈ ಸಾಧನಕ್ಕೆ ಬೇಕಾಗುವ ಜಿಯೋ ಪ್ರಿಪೇಡ್ ಅಥವಾ ಪೋಸ್ಟ್ ಪೇಡ್ ಸಿಮ್, ರಿಲಾಯನ್ಸ್ ಡಿಜಿಟಲ್ ಅಥವಾ DxMini ಸ್ಟೋರ್ಸ್ ನಲ್ಲಿ ದೊರಕಲಿದೆ. ವಿಳಾಸದ ಪ್ರತಿ ಹಾಗೂ ಗುರುತಿನ ಚೀಟಿಯ ಪ್ರತಿ ಹಾಗೂ ಪಾಸ್ ಪೋರ್ಟ್ ಸೈಜ್ ಫೋಟೋ ನೀಡಿ, ಫಾರ್ಮ್ ತುಂಬಿ 1,999 ರೂಪಾಯಿ ನೀಡಿದ್ರೆ ಮುಗೀತು. ದಾಖಲೆ ನೀಡಿ, ಸಿಮ್ ಪಡೆದ ನಾಲ್ಕು ಗಂಟೆಗಳೊಳಗೆ ನೀವು ನೀಡಿದ ಮೊಬೈಲ್ ನಂಬರ್ ಗೆ ಎಸ್ ಎಂ ಎಸ್ ಬರಲಿದೆ. ನಂತ್ರದ ಒಂದು ಗಂಟೆಯಲ್ಲಿ ಜಿಯೋ ಫೈ  ನಿಮ್ಮ ಬಳಕೆಗೆ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...