alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯರ ಹೆಮ್ಮೆಗೆ ಕಾರಣವಾಗಿದೆ ಮಹಿಳೆಯರ ಈ ತಂಡ

ನೌಕಾಯಾನದ ಮೂಲಕ ಪ್ರಪಂಚ ಸುತ್ತಿದ ಮಹಿಳಾ ತಂಡವು ಭಾರತಕ್ಕೆ ಹಿಂದಿರುಗಿದೆ. ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಶಿ ನೇತೃತ್ವದಲ್ಲಿ ಆರು ಮಂದಿ ಮಹಿಳಾ ಅಧಿಕಾರಿಗಳ ತಂಡ ನವಿಕಾ ಸಾಗರ ಪರಿಕ್ರಮ ಎಂಬ ದಂಡಯಾತ್ರೆ ಕೈಗೊಂಡಿದ್ದರು. ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ನೌಕಾಯಾನ ಕೈಗೊಂಡ ಮಹಿಳಾ ಸಿಬ್ಬಂದಿ ತಂಡ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಕಳೆದ ವರ್ಷದ ಸೆಪ್ಟಂಬರ್ 10 ರಂದು ಗೋವಾದಿಂದ ಹೊರಟ ಈ ತಂಡ ಬರೋಬ್ಬರಿ 21,600 ನಾಟಿಕಲ್ ಮೈಲಿಗಳನ್ನ ಸಂಚರಿಸಿದೆ. ಭಾರತೀಯ ನಿರ್ಮಿತ ಐ ಎನ್ ಎಸ್ ವಿ ತಾರಿಣಿಯಲ್ಲಿ ಸುಮಾರು 5 ದೇಶಗಳು, ನಾಲ್ಕು ಖಂಡಗಳು, ಮೂರು ಸಾಗರಗಳು ಮತ್ತು ಎರಡು ಬಾರಿ ಸಮ ಭಾಜಕ ವೃತ್ತ ದಾಟಿ ಈ ನೌಕಾ ತಂಡ ಮರಳಿ ಬಂದಿದೆ. ಇನ್ನು ಈ ತಂಡದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಪ್ರತಿಭಾ ಜಮ್ವಾಲ್, ಸ್ವಾತಿ ಪಿ, ಐಶ್ವರ್ಯ, ಎಸ್. ವಿಜಯಾ ದೇವಿ ಮತ್ತು ಪಾಯಲ್ ಗುಪ್ತಾ ಸಹ ಸೇರಿದ್ದಾರೆ.

2009 -2010 ರಲ್ಲಿ ಪ್ರಪಂಚದಾದ್ಯಂತ ನೌಕಾಯಾನದ ಮೂಲಕ ಸುತ್ತಿ ಬಂದ ಮೊದಲ ಭಾರತೀಯ ಕ್ಯಾಪ್ಟನ್ ದಿಲೀಪ್ ದೊಂಡೆಯವರ ನೇತೃತ್ವದಲ್ಲಿ ಈ ಮಹಿಳಾ ಅಧಿಕಾರಿಗಳ ತಂಡಕ್ಕೆ ತರಬೇತಿ ನೀಡಲಾಗಿತ್ತು. ಹಾಗೆಯೇ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಕ್ಯಾಪ್ಟನ್ ಅಟೋಲ್ ಸಿನ್ಹಾ, ಮಹಿಳೆಯರ ಸಮುದ್ರಯಾನಕ್ಕೆ ಮೂರು ವರ್ಷಗಳ ಕಾಲ ತಯಾರಿ ನಡೆಸಿದ್ರು. ಕೊನೆಗೂ ಯಶಸ್ವಿಯಾಗಿ ಸಮುದ್ರಯಾನ ನಡೆಸಿ ಬಂದ ಮಹಿಳಾ ಅಧಿಕಾರಿಗಳ ತಂಡವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ನೌಕಾಪಡೆ ಮುಖ್ಯಸ್ಥ ಸುನೀಲ್ ಲನ್ಬಾ ಗೋವಾದಲ್ಲಿ ಅಭಿಮಾನದಿಂದ ಬರಮಾಡಿಕೊಂಡ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...