alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಕಸ್ಮಿಕವಾಗಿ ಮುಟ್ಟಿದರೆ ಲೈಂಗಿಕ ದೌರ್ಜನ್ಯವಲ್ಲ’

ನವದೆಹಲಿ: ಎಲ್ಲಾ ಆಕಸ್ಮಿಕ ಶಾರೀರಿಕ ಸ್ಪರ್ಶವನ್ನು ಲೈಂಗಿಕ ಕಿರುಕುಳವೆಂದು ಕರೆಯಲಾಗದು ಎಂದು ದೆಹಲಿ ಹೈಕೋರ್ಟ್ ನ್ಯಾ. ವಿಭು ಬಕ್ರು ಹೇಳಿದ್ದಾರೆ.

ಜಗಳ ಮತ್ತಿತರ ಸಂದರ್ಭಗಳಲ್ಲಿ ಸಹೋದ್ಯೋಗಿ ಕೈ ಹಿಡಿದು ಹೊರಗೆ ತಳ್ಳಿದರೆ, ಅದನ್ನು ಲೈಂಗಿಕ ಕಿರುಕುಳ ಎಂದು ಪರಿಗಣಿಸಲು ಸಾಧ್ಯವಿಲ್ಲ. ತಮಗೆ ಇಷ್ಟವಿಲ್ಲದ ವ್ಯಕ್ತಿ ಲೈಂಗಿಕ ಉದ್ದೇಶದಿಂದ ದೈಹಿಕ ಸ್ಪರ್ಶ ಮಾಡಿದಲ್ಲಿ ಅದನ್ನು ಲೈಂಗಿಕ ಕಿರುಕುಳ ಎನ್ನಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ.

ದೆಹಲಿಯ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿಯ ಉದ್ಯೋಗಿಯೊಬ್ಬರು ತಮ್ಮ ಕೈಹಿಡಿದುಕೊಂಡು ಸಹೋದ್ಯೋಗಿ ಹೊರಗೆ ತಳ್ಳುವ ಮೂಲಕ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದರು.

ಈ ದೂರು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್, ಎಲ್ಲಾ ದೈಹಿಕ ಸ್ಪರ್ಶವನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗದು ಎಂದು ತಿಳಿಸಿದೆ.

ಉದ್ಯೋಗಿ ಇದಕ್ಕಿಂತ ಮೊದಲು ಸಂಸ್ಥೆಯ ದೂರು ಸಮಿತಿ ಮತ್ತು ಶಿಸ್ತು ಸಮಿತಿಗೆ ದೂರು ನೀಡಿದ್ದು, ಆಗಲೂ ಲೈಂಗಿಕ ದೌರ್ಜನ್ಯ ಆರೋಪವನ್ನು ತಳ್ಳಿ ಹಾಕಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...