alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಚೆ ಇಲಾಖೆಯ ಸ್ಟಾಂಪ್ ಮೇಲೂ ಇತ್ತು ಮಗುವಿಗೆ ಹಾಲೂಣಿಸುವ ತಾಯಿಯ ಚಿತ್ರ

ಮಲಯಾಳಿ ಮ್ಯಾಗಝೀನ್ ‘ಗೃಹಲಕ್ಷ್ಮಿ’ಯ ಕವರ್ ಪೇಜ್ ತೀವ್ರ ವಿವಾದಕ್ಕೀಡಾಗಿದೆ. ರೂಪದರ್ಶಿಯೊಬ್ಬಳು ಮಗುವಿಗೆ ಸ್ತನಪಾನ ಮಾಡುತ್ತಿರುವ ಫೋಟೋವನ್ನು ಕವರ್ ಪೇಜ್ ನಲ್ಲಿ ಪ್ರಕಟಿಸಲಾಗಿದೆ. ಇದು ಅಶ್ಲೀಲ ಅನ್ನೋದು ಹಲವರ ವಾದ.

ಕೇರಳದ ವಕೀಲ ವಿನೋದ್ ಮ್ಯಾಥ್ಯೂ ಎಂಬುವವರು ಮ್ಯಾಗಝೀನ್ ವಿರುದ್ಧ ಕೇಸ್ ಕೂಡ ದಾಖಲು ಮಾಡಿದ್ದಾರೆ. ಪ್ರತಿಯೊಬ್ಬರೂ ತಾಯಿಯ ಎದೆಹಾಲು ಕುಡಿದೇ ಬೆಳೆದಿರುತ್ತಾರೆ, ಅಂಥದ್ರಲ್ಲಿ ಆ ಫೋಟೋ ನೋಡಿ ಅಸಹ್ಯಪಟ್ಟುಕೊಳ್ಳುವಂಥದ್ದೇನಿದೆ ಅನ್ನೋದು ಮಹಿಳೆಯರ ಪ್ರಶ್ನೆ.

ತಾಯಿ ಮಗುವಿಗೆ ಹಾಲುಣಿಸುವ ದೃಶ್ಯ ಅಸಹ್ಯಪಟ್ಟುಕೊಳ್ಳುವಂಥದ್ದಲ್ಲ ಅನ್ನೋದಂತೂ ಸತ್ಯ. ಆದ್ರೂ ಭಾರತದಲ್ಲಿ ಬಹಿರಂಗವಾಗಿ ಅದನ್ನು ಸ್ವೀಕರಿಸಲು ಜನರೇ ಒಪ್ಪುತ್ತಿಲ್ಲ. ಫೋಟೋ ಅಶ್ಲೀಲ ಎನ್ನುತ್ತಿರುವವರು 1984ರ ಭಾರತೀಯ ಅಂಚೆ ಇಲಾಖೆಯ ಸ್ಟಾಂಪ್ ಅನ್ನು ಗಮನಿಸಬೇಕು.

ಆ ಸ್ಟಾಂಪ್ ಮೇಲೆ ಮಗುವಿಗೆ ಎದೆಹಾಲು ಉಣಿಸುತ್ತಿರುವ ತಾಯಿಯ ಚಿತ್ರವಿದೆ. ರಮೀಂದರ್ ಎಂಬಾತ ಇದನ್ನು ಫೋಟೋ ಸಮೇತ ಟ್ವೀಟ್ ಮಾಡಿದ್ದಾನೆ. ಆಧುನಿಕ ವಿಚಾರಧಾರೆಯುಳ್ಳವರು, ಮುಕ್ತ ಮನಸ್ಸಿನವರು 2018 ರಲ್ಲೂ ಅದನ್ನು ಮುಕ್ತವಾಗಿ ಸ್ವೀಕರಿಸದೇ ಇರುವುದು ನಿಜಕ್ಕೂ ದುರಂತ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...