alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗ್ರಾಮದಲ್ಲಿ ಎಲ್ಲರ ಜನ್ಮ ದಿನಾಂಕ ಜನವರಿ 1….

ಡೆಹ್ರಾಡೂನ್ ನ ಗ್ರಾಮವೊಂದರಲ್ಲಿ ಎಲ್ಲರ ಜನ್ಮ ದಿನಾಂಕವೂ ಜನವರಿ 1. ಹರಿದ್ವಾರದಿಂದ 20 ಕಿಮೀ ದೂರದಲ್ಲಿರೋ ಗೈಂದಿ ಖಾತಾ ಎಂಬ ಊರಿನಲ್ಲಿರೋ ಎಲ್ಲರ ಆಧಾರ್ ಕಾರ್ಡ್ ಮೇಲೂ ಜನ್ಮ ದಿನಾಂಕ ಜನವರಿ 1 ಅಂತಾನೇ ನಮೂದಾಗಿದೆ.

ಗ್ರಾಮದವರೆಲ್ಲ ಒಟ್ಟಾಗಿ ಪ್ರೈವೇಟ್ ಏಜೆನ್ಸಿಯೊಂದರಲ್ಲಿ ಆಧಾರ್ ಕಾರ್ಡ್ ಮಾಡಿಸಿದ್ದಾರೆ. ತಮ್ಮ ವಿವರವನ್ನುಳ್ಳ ಮತದಾರರ ಗುರುತಿನ ಚೀಟಿ ಹಾಗೂ ರೇಶನ್ ಕಾರ್ಡ್ ನೀಡಿದ್ದಾರೆ. ಆದ್ರೂ ಯಡವಟ್ಟು ಏಜೆನ್ಸಿ ಗ್ರಾಮಸ್ಥರ ಆಧಾರ್ ಕಾರ್ಡ್ ನಲ್ಲಿ ಇಂಥಾ ಪ್ರಮಾದ ಎಸಗಿದೆ.

ಅಲಹಾಬಾದ್ ನ ಕಂಜಸಾ ಎಂಬ ಗ್ರಾಮದಲ್ಲೂ ಅಲ್ಲಿನ ನಿವಾಸಿಗಳ ಆಧಾರ್ ಕಾರ್ಡ್ ಮೇಲೆ ಜನ್ಮ ದಿನಾಂಕವನ್ನು ಜನವರಿ 1 ಅಂತಾನೇ ನಮೂದಿಸಲಾಗಿದೆಯಂತೆ. ಅಷ್ಟೇ ಅಲ್ಲ ಹುಟ್ಟಿದ ವರ್ಷವನ್ನು ಕೂಡ ಖಾಸಗಿ ಏಜೆನ್ಸಿ ತಪ್ಪು ತಪ್ಪಾಗಿ ದಾಖಲಿಸಿದೆ. 80ರ ವೃದ್ಧೆಗೆ 22 ವರ್ಷ ಅಂತಾ ನಮೂದಿಸಿದ್ರೆ, ಚಿಕ್ಕ ಮಕ್ಕಳಿಗೆ 60 ವರ್ಷ ಅಂತಾ ಬರೆಯಲಾಗಿದೆ.

ಖಾಸಗಿ ಏಜೆನ್ಸಿ ಆಧಾರ್ ಕಾರ್ಡ್ ನಲ್ಲಿ ಮಾಡಿರುವ ಪ್ರಮಾದದಿಂದಾಗಿ ಗ್ರಾಮಸ್ಥರಿಗೆ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಪ್ರತಿ ಇಲಾಖೆಯಲ್ಲೂ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ ವಿವರ ನೀಡುವುದು ಕಡ್ಡಾಯ. ಆದ್ರೆ ಅದರಲ್ಲಿ ವೈಯಕ್ತಿಕ ವಿವರಗಳೇ ತಪ್ಪಾಗಿರುವುದರಿಂದ ಗ್ರಾಮಸ್ಥರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...