alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಮದ್ಯದ ಬಾಟಲಿಗಳ ಮೇಲೆ ಬೀಳಲಿದೆ ಮುದ್ರೆ…!

ಮದ್ಯದ ಬಾಟಲಿಗಳ ಮೇಲೆ ಡ್ರಿಂಕ್ & ಡ್ರೈವ್ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶ ಮುದ್ರಣವನ್ನು ಕಡ್ಡಾಯಗೊಳಿಸಲು ಭಾರತದ ಆಹಾರ ನಿಯಂತ್ರಕ FSSAI ನಿರ್ಧರಿಸಿದೆ. ಆದ್ರೆ ತಂಬಾಕು ಉತ್ಪನ್ನಗಳ ಮೇಲಿರುವಂತೆ ಚಿತ್ರ ಸಹಿತ ಮೆಸೇಜ್ ಅಳವಡಿಸಬೇಕೆಂಬ ಪ್ರಸ್ತಾಪವನ್ನು ತಿರಸ್ಕರಿಸಿದೆ.

ಡ್ರಿಂಕ್ & ಡ್ರೈವ್ ಕುರಿತಂತೆ ಎನ್ ಜಿ ಓ ಒಂದು ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈ ಬಗ್ಗೆ ಗಮನ ಹರಿಸುವಂತೆ FSSAIಗೆ ಸೂಚನೆ ನೀಡಿತ್ತು. ಆದ್ರೆ ಜಾಗತಿಕ ಮಟ್ಟದಲ್ಲಿ ಮದ್ಯದ ಬಾಟಲಿಗಳ ಮೇಲೆ ಈ ರೀತಿ ಎಚ್ಚರಿಕೆ ಸಂದೇಶ ಮುದ್ರಣವನ್ನು ಕಡ್ಡಾಯ ಮಾಡಿಲ್ಲ.

ಮದ್ಯ ತಯಾರಿಕಾ ಕಂಪನಿಯ ಮಾಲೀಕರು ಇಚ್ಛಿಸಿದಲ್ಲಿ ಮೆಸೇಜ್ ಮುದ್ರಿಸಬಹುದು. ಆದ್ರೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದ್ರೆ ಭಾರತದಲ್ಲಿ ಇದನ್ನು ಕಡ್ಡಾಯಗೊಳಿಸುವುದಾಗಿ FSSAI ಹೇಳಿದೆ. ವಿವಿಧ ಮದ್ಯದ ಬ್ರಾಂಡ್ ಮಾಲೀಕರ ಜೊತೆಗೂ ಈ ಕುರಿತಂತೆ ಚರ್ಚೆ ನಡೆಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...