alex Certify
ಕನ್ನಡ ದುನಿಯಾ       Mobile App
       

Kannada Duniya

ತ್ರಿವಳಿ ತಲಾಕ್ ವಿರುದ್ಧ ನಿಂತ ಶಿಯಾ ಪರ್ಸನಲ್ ಲಾ ಬೋರ್ಡ್

shia-board

ಆಲ್ ಇಂಡಿಯಾ ಶಿಯಾ ಪರ್ಸ್ನಲ್ ಲಾ ಬೋರ್ಡ್ ಮೂರು ಮಹತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಪತ್ವಾ ಜಾರಿಗೊಳಿಸಿದೆ. ಗೋ ಹತ್ಯೆ ಮಾಡದಂತೆ ಹಾಗೂ ಗೋ ಮಾಂಸ ಸೇವನೆ ಮಾಡದಂತೆ ಮುಸ್ಲಿಂ ಸಮುದಾಯಕ್ಕೆ ಮನವಿ ಸಲ್ಲಿಸಿದೆ.

ಲಕ್ನೋದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಗೋ ಹತ್ಯೆ ನಿಲ್ಲಿಸುವಂತೆ ಮನವಿ ಮಾಡಲಾಗಿದೆ. ಎರಡು ಸಮುದಾಯದ ನಡುವೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಗಲಾಟೆ ನಿಲ್ಲಬೇಕಾದ್ರೆ ಗೋ ಮಾಂಸವನ್ನು ಮುಸ್ಲಿಂರು ತ್ಯಜಿಸಬೇಕೆಂದು ಬೋರ್ಡ್ ಅಭಿಪ್ರಾಯಪಟ್ಟಿದೆ.

ದೇಶದಲ್ಲಿ ಸದ್ಯ ಬಹು ಚರ್ಚೆಯ ವಿಷಯವಾಗಿರುವ ತ್ರಿವಳಿ ತಲಾಕ್ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ತ್ರಿವಳಿ ತಲಾಕ್ ನಿಷೇಧ ಮಾಡುವುದನ್ನು ಬೋರ್ಡ್ ಸಮರ್ಥಿಸಿಕೊಂಡಿದೆ. ತ್ರಿವಳಿ ತಲಾಕ್ ವಿರುದ್ಧ ಕಾನೂನು ರಚನೆಯಾಗಬೇಕು. ಮಹಿಳೆಯರಿಗೆ ಅಧಿಕಾರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಮಿಟಿ ರಚನೆ ಮಾಡಬೇಕೆಂದು ಬೋರ್ಡ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದೇ ವೇಳೆ ಅಯೋಧ್ಯೆ ರಾಮ ಮಂದಿರ ವಿಚಾರವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದು ತಿಳಿಸಿದೆ. ಎರಡೂ ಗುಂಪಿನ ಜನರು ಅಯೋಧ್ಯೆ ರಾಮಮಂದಿರ ವಿಚಾರವನ್ನು ಮಾತುಕತೆ ಮೂಲಕ ಬಗಹರಿಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಇದನ್ನು ನಾವು ಸ್ವಾಗತಿಸುವುದಾಗಿ ಬೋರ್ಡ್ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...