alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ‌ ಅಭಿಮಾನಿ‌ಗಳಿಗೆ ಇಲ್ಲಿ ʼಉಚಿತʼ ಊಟ…!

ಭಾರತದ ‌ಸೂಪರ್ ಕೂಲ್ ಕ್ಯಾಪ್ಟನ್ ಆಗಿದ್ದ ಮಹೇಂದ್ರ ‌ಸಿಂಗ್ ಧೋನಿಗೆ ದೊಡ್ಡ ಅಭಿಮಾನಿ ಬಳಗ ಇರುವುದು‌ ಎಲ್ಲರಿಗೂ ತಿಳಿದ ಅಂಶ. ಆದರೆ ಇಲ್ಲೊಬ್ಬನ ಅಭಿಮಾನದ ಪರಾಕಷ್ಠೆ ಕೇಳಿದರೆ ಅಚ್ಚರಿಯಾಗುವುದರಲ್ಲಿ ಅನುಮಾನ ಇಲ್ಲ.

ಕೋಲ್ಕತ್ತಾದಲ್ಲಿರುವ ಧೋನಿ ಅಭಿಮಾನಿಯೊಬ್ಬ ಹೋಟೆಲ್ ಉದ್ಯಮ ನಡೆಸುತ್ತಿದ್ದು, ಅವರು ಧೋನಿ ಅಭಿಮಾನಿಗಳಿಗೆ ಕಳೆದ ಎರಡು ವರ್ಷದಿಂದ ಉಚಿತ ಆಹಾರ ನೀಡುತ್ತಿದ್ದಾರೆ. ಈ‌ ಅಭಿಮಾನಿ ಹೆಸರು ಶಂಭು ಬೋಸ್ ಎಂದು ಹೇಳಲಾಗಿದೆ. ಅಚ್ಚರಿಯೆಂದರೆ ಯಾವುದೇ ಷರತ್ತುಗಳನ್ನು ಹಾಕದೇ ಶಂಭು ಆಹಾರ ನೀಡುತ್ತಿದ್ದು, ಧೋನಿ ಅಭಿಮಾನಿ‌ ಎಂದರೆ ಹೊಟ್ಟೆ ತುಂಬಾ ಊಟ‌ ಸಿಗಲಿದೆ. ಆದ್ದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಈ‌ ಹೋಟೆಲ್‌, ಧೋನಿ‌‌ ಹೊಟೇಲ್ ಎಂದೇ ಪ್ರಸಿದ್ಧಿಯಾಗಿದೆ.

ಹೊಟೇಲ್ ಒಳಗೆ ಹೋಗುತ್ತಿದ್ದಂತೆ ಮೂಲೆ ಮೂಲೆಯಲ್ಲಿಯೂ ಧೋನಿಯ‌ ಫೋಟೋಗಳನ್ನೇ ಅಂಟಿಸಲಾಗಿದೆ‌. ಈ‌ ಬಗ್ಗೆ ಶಂಭು ಮಾತನಾಡಿದ್ದು, ಧೋನಿಯ ಆಟ ಮಾತ್ರವಲ್ಲದೇ ಅವರ ನಡವಳಿಕೆ ಇಷ್ಟ‌. ಅವರ ಮೊದಲ‌ ಪಂದ್ಯದಿಂದಲೇ ನಾ ಅವರ ಅಭಿಮಾನಿಯಾದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಾಜ್ಯ ಸರ್ಕಾರ ಪತನಗೊಳಿಸುವ ಪ್ರಯತ್ನದ ಹಿಂದಿದೆಯಾ ಬಿಜೆಪಿ ನಾಯಕರ ಪಾತ್ರ...?

    View Results

    Loading ... Loading ...