alex Certify
ಕನ್ನಡ ದುನಿಯಾ       Mobile App
       

Kannada Duniya

ಬುರ್ಖಾ ಒಳಗಿದ್ದದ್ದು ಅವಳಲ್ಲ ಅವನು..!

burqa

ಆಲಿಗಢ ರೈಲ್ವೆ ನಿಲ್ದಾಣದಲ್ಲಿ ಬುರ್ಖಾ ಧರಿಸಿ ತಿರುಗಾಡ್ತಾ ಇದ್ದ ಯುವಕನೊಬ್ಬನನ್ನು ಸ್ಥಳೀಯರು ಪತ್ತೆ ಹಚ್ಚಿ ಪೊಲೀಸ್ ವಶಕ್ಕೆ ನೀಡಿದ್ದಾರೆ. ಯುವಕನನ್ನು ಬಂಧಿಸಿರುವ ಜಿಆರ್ ಪಿ ಪ್ರಕರಣದ ಬಗ್ಗೆ ತನಿಖೆ ನಡೆಸ್ತಾ ಇದೆ.

ರೈಲ್ವೆ ನಿಲ್ದಾಣದಲ್ಲಿ ಕೆಲವರು ದೆಹಲಿಗೆ ತೆರಳುವ ಪ್ಯಾಸೆಂಜರ್ ರೈಲಿಗಾಗಿ ಕಾದು ಕುಳಿತಿದ್ದರು. ಅವರ ಕಣ್ಣು ಬುರ್ಖಾ ಧರಿಸಿದ್ದ ಯುವತಿ ಮೇಲೆ ಹೋಗಿದೆ. ಆದ್ರೆ ಬುರ್ಖಾದೊಳಗಿದ್ದ ಯುವತಿಯ ಚಲನವಲನ ಅನುಮಾನ ಮೂಡಿಸಿದೆ. ಬುರ್ಖಾ ಧರಿಸಿದ್ದ ಯುವತಿಯನ್ನು ಹಿಂಬಾಲಿಸಿದಾಗ ಆಕೆ ಓಡಲು ಶುರುಮಾಡಿದ್ದಾಳೆ. ಕೊನೆಗೆ ಆಕೆಯನ್ನು ಹಿಡಿಯಲು ಯಶಸ್ವಿಯಾದ ಪ್ರಯಾಣಿಕರು  ಬುರ್ಖಾ ತೆಗೆದಾಗ ಅದು ಯುವತಿಯಲ್ಲ ಯುವಕ ಎಂಬುದು ಗೊತ್ತಾಗಿದೆ.

ಬಂಧಿತ ಯುವಕನ ಹೆಸರು ನಜ್ಮುಲ್ ಹಸನ್. ಆತ ಪಾಟ್ನಾದ ಸುಲ್ತಾನ್ ನಗರದವನು. ಈತ ಎಂಜಿನಿಯರ್. ಕೆಲ ದಿನಗಳ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಗಲಾಟೆಯಾಗಿತ್ತು. ಅವರು ಕೊಲೆ ಬೆದರಿಕೆ ಹಾಕಿದ್ದರು. ಹಾಗಾಗಿ ಬುರ್ಖಾ ಧರಿಸಿದ್ದೆ ಎಂದು ಯುವಕ ಹೇಳಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...