alex Certify
ಕನ್ನಡ ದುನಿಯಾ       Mobile App
       

Kannada Duniya

ಕುತೂಹಲಕ್ಕೆ ಕಾರಣವಾಗಿವೆ ಈ ವಿಚಿತ್ರ ಪಕ್ಷಿಗಳು….!

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರೋ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಮೂರು ವಿಚಿತ್ರ ಪಕ್ಷಿಗಳು ಪತ್ತೆಯಾಗಿವೆ. ಅವುಗಳನ್ನು ಏಲಿಯನ್ ಎಂದು ಭಾವಿಸಿ ಫೋಟೋ ಕ್ಲಿಕ್ಕಿಸಿರೋ ಸ್ಥಳೀಯರು ಸಾಮಾಜಿಕ ತಾಣಗಳಲ್ಲೂ ಅಪ್ಲೋಡ್ ಮಾಡಿದ್ದರು.

ಆ ಪಕ್ಷಿಗಳಲ್ಲಿ ರೆಕ್ಕೆ ಕಡಿಮೆಯಿತ್ತು, ಕಾಲುಗಳನ್ನು ಎತ್ತಿಕೊಂಡು ಅವು ವಿಚಿತ್ರ ಭಂಗಿಯಲ್ಲಿದ್ದವು. ಕಣ್ಣುಗಳು ಕೂಡ ದೊಡ್ಡದಾಗಿದ್ದರಿಂದ ಜನರು ಏಲಿಯನ್ ಗಳೆಂದೇ ಭಾವಿಸಿದ್ರು. ಆದ್ರೆ ಅವು ಏಲಿಯನ್ ಗಳಲ್ಲ, ಪೂರ್ವಭಾಗದಲ್ಲಿ ಕಂಡುಬರುವ ಗೂಬೆಗಳು ಅಂತಾ ನೆಹರು ಜಿಯಾಲಜಿಕಲ್ ಪಾರ್ಕ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಿಶೇಷ ಅಂದ್ರೆ ಈ ಗೂಬೆಗಳ ಮುಖ ಹೃದಯದ ಆಕಾರದಲ್ಲಿದೆ. ಬಹುಷಃ ಗೂಬೆಗಳು ಅನಾರೋಗ್ಯದಿಂದ ಬಳಲುತ್ತಿದ್ದು, ಪೌಷ್ಠಿಕಾಂಶದ ಕೊರತೆ ಕೂಡ ಕಂಡುಬಂದಿದೆ. ಅವುಗಳಿಗೆ ಚಿಕಿತ್ಸೆಯ ಅಗತ್ಯವಿದೆ ಅಂತಾ ಪಶುವೈದ್ಯರು ತಿಳಿಸಿದ್ದಾರೆ. ಸ್ಕಿನ್ ಇನ್ಫೆಕ್ಷನ್ ನಿಂದಾಗಿ ರೆಕ್ಕೆಗಳು ಉದುರಿ ಹೋಗಿರಬಹುದು ಅಂತಾನೂ ಶಂಕಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...