alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಪೋಸ್ಟ್ ನೋಡಿ ಬಾಲಕಿಯ ಪ್ರಾಣ ಉಳಿಸಿದ ಪೊಲೀಸರು

ಅಮೆರಿಕದ ಫೇಸ್ಬುಕ್ ಹೆಡ್ಕ್ವಾಟ್ರಸ್ ನಿಂದ ಬಂದ ಮಾಹಿತಿಯ ಮೇರೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಯುವತಿಯನ್ನ ಗುವಾಹಟಿ ಪೊಲೀಸರು ರಕ್ಷಿಸಿದ್ದಾರೆ. ಗುವಾಹಟಿಯ ಬಾಲಕಿಯೊಬ್ಬಳು ಫೇಸ್ಬುಕ್ ನಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಪೋಸ್ಟ್ ಒಂದನ್ನ ಹಾಕಿದ್ದಳು.

ಈ ಮಾಹಿತಿಯನ್ನು ಗಮನಿಸಿದ ಅಮೆರಿಕದ ಫೇಸ್ಬುಕ್ ಹೆಡ್ಕ್ವಾಟ್ರಸ್  ಕೂಡಲೇ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಫೇಸ್ಬುಕ್ ನಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಪೊಲೀಸರು 30 ನಿಮಿಷದ ಒಳಗೆ ಬಾಲಕಿಯನ್ನು ರಕ್ಷಿಸಿದ್ದಾರೆ. ಆನಂತರದಲ್ಲಿ ಬಾಲಕಿಯ ಪೋಷಕರ ಬಳಿ ಆಕೆಯನ್ನ ಸುರಕ್ಷಿತವಾಗಿ ತಲುಪಿಸಲಾಗಿದೆ.

ಬಾಲಕಿ ಬಳಸಿದ ಸಾಮಾಜಿಕ ಜಾಲತಾಣದ ಐಪಿ ಅಡ್ರೆಸ್ ಆಧಾರದಲ್ಲಿ ಬಾಲಕಿ ಇದ್ದ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಾಲಕಿ ಆತ್ಮಹತ್ಯೆಯ ಮನಸ್ಥಿತಿಯಿಂದ ಹೊರಬರುವಂತೆ ಮನೋ ವೈದ್ಯರಿಂದ ಚಿಕಿತ್ಸೆ ಕೊಡಿಸುವಂತೆ ಪೋಕಷಕರಿಗೆ ಪೊಲೀಸರು ಸೂಚನೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...