alex Certify
ಕನ್ನಡ ದುನಿಯಾ       Mobile App
       

Kannada Duniya

ಪೇದೆಯ ಸಮಯಪ್ರಜ್ಞೆಯಿಂದ ಬದುಕುಳಿದಿದ್ದಾನೆ ಬಾಲಕ

ಸಮಯದೊಂದಿಗೆ ಹೆಜ್ಜೆ ಹಾಕುವ ಧಾವಂತದಲ್ಲಿ ಜನತೆ ತಮ್ಮ ಕರ್ತವ್ಯವನ್ನೇ ಮರೆಯುತ್ತಿದ್ದಾರೆ. ತನ್ನ ಪುಟ್ಟ ಮಗುವಿನೊಂದಿಗೆ ರೈಲು ಏರಲು ಬಂದ ಮಹಿಳೆಯೊಬ್ಬಳು ರೈಲು ತಪ್ಪುತ್ತದೆಂಬ ಆತುರದಲ್ಲಿ ತನ್ನ ಮಗುವನ್ನೇ ಮರೆತಿದ್ದು, ಸಾವಿನ ದವಡೆಯಲ್ಲಿ ಸಿಲುಕಿದ್ದ ಬಾಲಕ ರೈಲ್ವೇ ಸುರಕ್ಷಾ ದಳದ ಪೇದೆಯೊಬ್ಬ ತೋರಿದ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇಂತದೊಂದು ಘಟನೆ ಮುಂಬೈ ರೈಲು ನಿಲ್ದಾಣದಲ್ಲಿ ನಡೆದಿದ್ದು, ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ನಾಯಗಾಂವ್ ರೈಲು ನಿಲ್ದಾಣದಿಂದ ಚರ್ಚ್ ಗೇಟ್ ಗೆ ತೆರಳುವ ಲೋಕಲ್ ಟ್ರೈನ್ ಏರಲು ತನ್ನ 7 ವರ್ಷದ ಮಗನೊಂದಿಗೆ ಬಂದ ಮಹಿಳೆಯೊಬ್ಬಳು ರೈಲು ಹೊರಟಿದೆಯೆಂಬ ಕಾರಣಕ್ಕೆ ಅದನ್ನು ಏರಲು ಗಡಿಬಿಡಿ ಮಾಡಿದ್ದು, ಆಕೆ ರೈಲು ಏರಲು ಸಫಲಳಾದರೂ ಆಕೆಯ ಮಗ ಫ್ಲಾಟ್ಫಾರಂ ಮೇಲೆ ಬಿದ್ದಿದ್ದಾನೆ.

ಇನ್ನೇನೂ ಆತ ರೈಲು ಹಳಿಗೆ ಸಿಲುಕಿಕೊಳ್ಳುತ್ತಾನೆನ್ನುವಷ್ಟರಲ್ಲಿ ಅಲ್ಲಿಯೇ ಇದ್ದ ರೈಲ್ವೇ ಸುರಕ್ಷಾ ದಳದ ಪೇದೆ ಸುನೀಲ್ ನಪಾ, ಬಾಲಕನ್ನು ಹಿಡಿದೆಳೆದಿದ್ದಾರೆ. ಅದಾಗಲೇ ರೈಲು ಏರಿದ್ದ ಮಹಿಳೆ, ಮಗ ತನ್ನ ಜೊತೆಯಿರದಿದ್ದನ್ನು ಗಮನಿಸಿ ಮುಂದಿನ ನಿಲ್ದಾಣದಲ್ಲಿ ಇಳಿದಿದ್ದು, ಬಳಿಕ ಬಂದು ಮಗನನ್ನು ಕರೆದುಕೊಂಡು ಹೋಗಿದ್ದಾಳೆ. ಪೇದೆ ಸುನೀಲ್, ಸಕಾಲಕ್ಕೆ ಸಮಯಪ್ರಜ್ಞೆ ಮೆರೆಯದಿದ್ದರೆ ಬಾಲಕ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದ್ದು, ರೈಲ್ವೇ ಅಧಿಕಾರಿಗಳು ಪೇದೆ ಸುನೀಲ್ ಕಾರ್ಯವನ್ನು ಶ್ಲಾಘಿಸಿದ್ದಾರಲ್ಲದೇ ಆತನಿಗೆ ಪುರಸ್ಕಾರ ನೀಡಲು ನಿರ್ಧರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...