alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುತ್ತೆ ಮದ್ಯ ಸೇವನೆಯಿಂದ ಸಾವನ್ನಪ್ಪುವವರ ಸಂಖ್ಯೆ

ಮದ್ಯ ಸೇವನೆಯಿಂದಾಗಿ ಲಿವರ್ ಉರಿಯೂತ, ಕ್ಯಾನ್ಸರ್ ಉಂಟಾಗಿ ಅಥವಾ ಕುಡಿದು ಗಾಡಿ ಓಡಿಸಿ ರಸ್ತೆ ಅಪಘಾತಗಳಿಗೆ ತುತ್ತಾಗುವ ಮೂಲಕ ಭಾರತದಲ್ಲಿ ಪ್ರತಿವರ್ಷ 2.6 ಲಕ್ಷ ಮಂದಿ ಅಸುನೀಗುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಈ ಅಂಕಿಅಂಶವನ್ನು ಪ್ರಕಟಿಸಿದ್ದು, ಆಲ್ಕೋಹಾಲ್ ಹಾಗೂ ಆರೋಗ್ಯ ಸಮಸ್ಯೆಗಳ ನಡುವಿನ ಸಂಬಂಧವನ್ನು ಒತ್ತಿ ಹೇಳಿದೆ.

ವಿಶ್ವಾದ್ಯಂತ ಪ್ರತಿದಿನ ಮದ್ಯ ಸೇವನೆಯಿಂದ 6,000 ಜನರು ಸಾಯುತ್ತಾರೆ. ಇವುಗಳಲ್ಲಿ ಶೇ.28ರಷ್ಟು ಮರಣಗಳು ಗಾಯದಿಂದಾಗುತ್ತವೆ, ಅಂದರೆ ಟ್ರಾಫಿಕ್ ಅಪಘಾತಗಳು, ಸ್ವಯಂಹಾನಿ ಮತ್ತು ಹಿಂಸೆಯಿಂದಾಗುತ್ತದೆ. ಶೇ.21 ರಷ್ಟು ಪಚನ ಸಮಸ್ಯೆಯಿಂದ ಉಂಟಾಗುತ್ತದೆ. ಶೇ.19ರಷ್ಟು ಹೃದಯದ ಕಾಯಿಲೆಯಿಂದ ಸಂಭವಿಸುತ್ತದೆ. ಉಳಿದವು ಸೋಂಕಿನ ಕಾಯಿಲೆ, ಕ್ಯಾನ್ಸರ್, ಮಾನಸಿಕ ಅಸ್ವಸ್ಥತೆ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಉಂಟಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಂಬಾಕು ನೀತಿಯ ರೀತಿಯಲ್ಲೇ ರಾಷ್ಟ್ರೀಯ ಆಲ್ಕೋಹಾಲ್ ನಿಯಂತ್ರಣ ನೀತಿಯನ್ನೂ ಜಾರಿಗೆ ತರಬೇಕು ಎಂದು ಭಾರತದ ಆರೋಗ್ಯ ತಜ್ಞರು ಒತ್ತಾಯಿಸಿದ್ದಾರೆ.

“ಆರೋಗ್ಯವು ರಾಜ್ಯದ ವಿಷಯವಾಗಿರುವುದರಿಂದ, ವಿವಿಧ ರಾಜ್ಯಗಳು ಭಿನ್ನ ನಿಯಮಗಳನ್ನು ಅನುಸರಿಸುತ್ತವೆ. ಮಹಾರಾಷ್ಟ್ರದಲ್ಲಿ ಮದ್ಯ ಸೇವನೆಗೆ ಕಾನೂನಾತ್ಮಕ ವಯಸ್ಸು 25 ವರ್ಷಗಳಾಗಿದ್ದರೆ, ಗೋವಾದಲ್ಲಿ 18 ವರ್ಷಗಳಿಗೇ ಕುಡಿಯಲು ಅವಕಾಶವಿದೆ. ದೇಶಾದ್ಯಂತ ಮದ್ಯ ಸೇವನೆಗೆ ಏಕರೂಪದ ನಿಯಮಕ್ಕಾಗಿ ಕೇಂದ್ರೀಯ ಕಾನೂನು ತರಲು ಇದೇ ಸೂಕ್ತ ಸಮಯ” ಎಂದು ಟಾಟಾ ಮೆಮೋರಿಯಲ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ.ಪಂಕಜ್ ಚತುರ್ವೇದಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...