alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಮುಖದಲ್ಲಿ ನಗು ಮೂಡಿಸಿದೆ ‘ಖಿಲಾಡಿ’ಯ ಹೊಸ ಚಿತ್ರ

akshay-kumar_640x480_51494319970

ನಟ ಅಕ್ಷಯ್ ಕುಮಾರ್ ಅವರ ಹೊಸ ಚಿತ್ರ ‘ಟಾಯ್ಲೆಟ್ : ಏಕ್ ಪ್ರೇಮ್ ಕಥಾ’ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲವೂ ಗೊತ್ತು. ದೆಹಲಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಿದ ಬಾಲಿವುಡ್ ಖಿಲಾಡಿ ತಮ್ಮ ಹೊಸ ಚಿತ್ರದ ಕಾನ್ಸೆಪ್ಟ್ ಅನ್ನು ವಿವರಿಸಿದ್ದಾರೆ. ಚಿತ್ರದ ಕಥೆ ಕೇಳಿ ಪ್ರಧಾನಿ ಮುಖದಲ್ಲೂ ನಗು ಮೂಡಿದೆಯಂತೆ.

ಈ ವಿಷಯವನ್ನು ಖುದ್ದು ಅಕ್ಷಯ್ ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿದ್ದಾರೆ. ‘ಟಾಯ್ಲೆಟ್ : ಏಕ್ ಪ್ರೇಮ್ ಕಥಾ’ ದೇಶದ ಸ್ವಚ್ಛತೆಯ ಕುರಿತ ಸಿನೆಮಾ. ಮೋದಿ ಅವರ ಸ್ವಚ್ಛ ಭಾರತ ಅಭಿಯಾನದ ಉದ್ದೇಶವನ್ನೇ ಈ ಸಿನೆಮಾ ಕೂಡ ಹೊಂದಿದೆ. ಈ ಚಿತ್ರ ಶೌಚಾಲಯಗಳ ನಿರ್ಮಾಣದ ಅಗತ್ಯ ಮತ್ತು ಸ್ವಚ್ಛತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿದೆ.

ಆಗಸ್ಟ್ 11ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಇನ್ನೊಂದೆಡೆ ದೇಶದ ಸೈನಿಕರಿಗೆ ನೆರವಾಗಲು ಅಕ್ಷಯ್ ಕುಮಾರ್ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಜನರು ನೇರವಾಗಿ ಯೋಧರಿಗೆ ಡೊನೇಶನ್ ನೀಡಲು ಸಹಕಾರಿಯಾಗಬಲ್ಲ ಆ್ಯಪ್ ಹಾಗೂ ವೆಬ್ ಸೈಟ್ ಸ್ಥಾಪನೆ ಕುರಿತಂತೆ ಪ್ರಧಾನಿ ಮೋದಿ ಅವರೊಂದಿಗೆ ಅಕ್ಷಯ್ ಚರ್ಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...