alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್‌ ಗೆ ಸಂಕಷ್ಟ

ನವದೆಹಲಿ: ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್‌ ಯಾದವ್‌ ಸರಕಾರಿ ಆಸ್ತಿ ಹಾನಿಗೊಳಿಸಿದ್ದಕ್ಕಾಗಿ 6 ಲಕ್ಷ ರೂ. ಪಾವತಿಸಬೇಕಾಗಿದೆ. ಸಿಎಂ ಆಗಿದ್ದ ವೇಳೆ ಸರಕಾರಿ ಬಂಗಲೆಯಲ್ಲಿದ್ದ ಅವರು, ಅದನ್ನು ತಮ್ಮ ಇಚ್ಛೆಗೆ ಬೇಕಾದಂತೆ ಬದಲಾವಣೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶದ ಬಳಿಕ, ಬಿಟ್ಟುಕೊಡುವ ವೇಳೆ ಕಟ್ಟಡಕ್ಕೆ ಹಾನಿ ಮಾಡಿದ್ದಾರೆ. 4.67 ಕೋಟಿ ರೂ. ಖರ್ಚು ಮಾಡಿರುವುದಾಗಿ ಅಖಿಲೇಶ್‌ ಹೇಳಿಕೆ ನೀಡಿದ್ದು, ಇಷ್ಟು ಮೊತ್ತದ ಬದಲಾವಣೆಯ ಯಾವುದೇ ಕುರುಹು ಇಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಸರ್ಕಾರಕ್ಕೆ 200 ಪುಟಗಳ ವರದಿ ನೀಡಿರುವ ಅಧಿಕಾರಿಗಳ ತಂಡ, ತಾರಸಿ, ಅಡುಗೆ ಮನೆ, ವಿದ್ಯುತ್‌ ಉಪಕರಣಗಳು, ಟೈಲ್ಸ್‌, ಹುಲ್ಲು ಹಾಸು, ಬಣ್ಣ, ಶೌಚಾಲಯಗಳು ಸೇರಿದಂತೆ ಹಾನಿಗೊಳಗಾದ ಮನೆಯ ವಸ್ತುಗಳ ಬಗ್ಗೆ ವಿವರಣೆ ನೀಡಿದ್ದಾರೆ. ಈ ಎಲ್ಲ ಹಾನಿ, ಅಖಿಲೇಶ್‌ ಅವರೇ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಭಾಗದಲ್ಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅಖಿಲೇಶ್‌ ಯಾವದವ್‌ ಅವರ ಜನಪ್ರಿಯತೆಗೆ ಬಿಜೆಪಿ ಹೆದರುತ್ತಿದೆ. ಅದಕ್ಕಾಗಿ ಇಂತಹ ಆರೋಪಗಳ ಮೂಲಕ ಬಚಾವಾಗಲು ನೋಡುತ್ತಿದೆ. ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಯ ಪ್ರಚಾರ ಆರಂಭಿಸಿದ ವೇಳೆ, ಬಂಗಲೆ ಗದ್ದಲ ಆರಂಭವಾಗಿತ್ತು ಎಂದು ಸಮಾಜವಾದಿ ಮುಖಂಡ ಹಾಗೂ ಅಖಿಲೇಶ್‌ಗೆ ಆಪ್ತರಾಗಿರುವ ಸುನಿಲ್‌ ಯಾದವ್‌ ಹೇಳಿಕೆ ನೀಡಿದ್ದಾರೆ.

ಪ್ರಕರಣ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ರಾಮ್‌ನಾಯಕ್‌, ಸಿಎಂ ಯೋಗಿ ಆದಿತ್ಯನಾಥ್‌ ಗೆ ಸೂಚಿಸಿದ್ದಾರೆ. ಬಂಗಲೆ, ತೆರಿಗೆ ಪಾವತಿದಾರರ ಸ್ವತ್ತು. ಸರಕಾರಿ ಆಸ್ತಿ ಹಾನಿಮಾಡುವುದು ಗಂಭೀರ ವಿಚಾರ ಎಂದು ಅವರು ಸೂಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...