alex Certify
ಕನ್ನಡ ದುನಿಯಾ       Mobile App
       

Kannada Duniya

ಲ್ಯಾಪ್ ಟಾಪ್ ಆಯ್ತು ಇನ್ಮುಂದೆ ಬಡವರಿಗೆ ಸಿಗಲಿದೆ ಉಚಿತ ಮೊಬೈಲ್

akhilesh-yadav

ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆಗೆ ಸಮಾಜವಾದಿ ಪಕ್ಷ ಭರ್ಜರಿ ತಯಾರಿ ನಡೆಸ್ತಾ ಇದೆ. ಹಿಂದೆ ಲ್ಯಾಪ್ ಟಾಪ್ ನೀಡಿದ್ದ ಪಕ್ಷ, ಈಗ ಬಡವರಿಗೆ ಉಚಿತವಾಗಿ ಮೊಬೈಲ್ ನೀಡಲು ಚಿಂತನೆ ನಡೆಸಿದೆ.

ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈ ವಿಚಾರವನ್ನು ಹೇಳಿದ್ದಾರೆ. ಖಾಸಗಿ ಮೊಬೈಲ್ ಕಂಪನಿಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಖಿಲೇಶ್, ಮುಂದಿನ ದಿನಗಳಲ್ಲಿ ಪಕ್ಷ ಬಡವರಿಗೆ ಉಚಿತವಾಗಿ ಮೊಬೈಲ್ ನೀಡಲು ಚಿಂತಿಸುತ್ತಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಇದನ್ನು ಘೋಷಿಸುವ ಸಂಭವವಿದೆ ಎಂದಿದ್ದಾರೆ.

2012 ರ ಚುನಾವಣಾ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ನೀಡುವ ಘೋಷಣೆ ಮಾಡಿತ್ತು. ಇದು ಯುವಜನತೆ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಹಾಗಾಗಿಯೇ ಅಖಿಲೇಶ್ ಯಾದವ್ ಮುಖ್ಯಮಂತ್ರಿ ಸ್ಥಾನಕ್ಕೇರಲು ಸಾಧ್ಯವಾಯ್ತು. ಈಗ ಮತ್ತದೇ ನಿಟ್ಟಿನಲ್ಲಿ ಹೆಜ್ಜೆ ಇಡಲು ಸಮಾಜವಾದಿ ಪಕ್ಷ ಚಿಂತನೆ ನಡೆಸಿದೆ.

ಸಮಾಜವಾದಿ ಪಕ್ಷ ಇಂಗ್ಲೀಷ್ ಹಾಗೂ ಕಂಪ್ಯೂಟರ್ ವಿರೋಧಿ ಎನ್ನಲಾಗ್ತಾ ಇತ್ತು. ಆದ್ರೆ ತಂತ್ರಜ್ಞಾನದ ಜೊತೆ ನಡೆಯುವ ಪಕ್ಷ ನಮ್ಮದು. ನಾವು ಈ ಹಿಂದೆ ಲ್ಯಾಪ್ ಟಾಪ್ ನೀಡಿದ್ದೆವು. ಮುಂದಿನ ದಿನಗಳಲ್ಲಿ ಪಕ್ಷ, ಬಡವರಿಗೆ ಮೊಬೈಲ್ ನೀಡುವ ಸಾಧ್ಯತೆ ಇದೆ ಎಂದಿದ್ದಾರೆ ಅಖಿಲೇಶ್ ಯಾದವ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...