alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ಸ್ಕೂಲ್ ಬ್ಯಾಗ್ ಮೇಲೆ ಅಖಿಲೇಶ್ ಫೋಟೋ

gujarat-schoolbags_650x400_71497346380

ಗುಜರಾತ್ ನ ಛೋಟಾ ಉದೇಪುರ್ ನಲ್ಲಿ ಪಂಚಾಯ್ತಿ ವತಿಯಿಂದ 12,000 ಸ್ಕೂಲ್ ಬ್ಯಾಗ್ ಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಗಿದೆ. ಅದರ ಮೇಲೆ ಪಂಚಾಯ್ತಿ ಲೋಗೋ ಇದೆ, ಆದ್ರೆ ಕೆಳಭಾಗದಲ್ಲಿ ಉತ್ತರಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರ ಫೋಟೋ ಕೂಡ ಹಾಕಲಾಗಿದೆ.

ಮಕ್ಕಳ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ಪ್ರವೇಶ ಉತ್ಸವ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಲ್ಲಿ ಈ ಸ್ಕೂಲ್ ಬ್ಯಾಗ್ ಗಳನ್ನು ವಿತರಣೆ ಮಾಡಲಾಗಿದೆ. ಗುಜರಾತ್ ಸ್ಕೂಲ್ ಬ್ಯಾಗ್ ಗಳ ಮೇಲೆ ಅಖಿಲೇಶ್ ಯಾದವ್ ಫೋಟೋ ಬಂದಿದ್ಹೇಗೆ ಅನ್ನೋದೇ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಈ ಬಗ್ಗೆ ಶಿಕ್ಷಣ ಇಲಾಖೆ ತನಿಖೆ ನಡೆಸಿದಾಗ ಅಸಲಿ ವಿಷಯ ಬಯಲಾಗಿದೆ. ಕಳೆದ ಬಾರಿ ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಅಖಿಲೇಶ್ ಸರ್ಕಾರ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್, ಲ್ಯಾಪ್ ಟಾಪ್, ಸ್ಟಡಿ ಮಟೀರಿಯಲ್ ಹಾಗೂ ತಟ್ಟೆ ಲೋಟಗಳನ್ನು ಕೂಡ ವಿತರಿಸಿತ್ತು. ನಂತರ 1 ರಿಂದ 8ನೇ ತರಗತಿಯ ಮಕ್ಕಳಿಗಾಗಿ 1.8 ಕೋಟಿ ಮೊತ್ತದ ಸ್ಕೂಲ್ ಬ್ಯಾಗ್ ಗಳನ್ನು ಮಂಜೂರು ಮಾಡಿತ್ತು.

ಆದ್ರೆ ಬ್ಯಾಗ್ ವಿತರಿಸುವಷ್ಟರಲ್ಲಿ ಅಖಿಲೇಶ್ ಸರ್ಕಾರವೇ ಪತನಗೊಂಡಿದೆ. ಆದ್ರೂ ಯೋಗಿ ಆದಿತ್ಯನಾಥ್ ಸರ್ಕಾರ ಅಖಿಲೇಶ್ ಯಾದವ್ ಅವರ ಫೋಟೋ ಇದ್ದ ಸ್ಕೂಲ್ ಬ್ಯಾಗ್ ಗಳನ್ನು ಮಕ್ಕಳಿಗೆ ವಿತರಿಸಲು ಅನುಮತಿ ನೀಡಿದೆ. ರಾಜಕೀಯ ಅಹಮ್ಮಿನಿಂದಾಗಿ ಸಾರ್ವಜನಿಕ ಹಣ ಪೋಲಾಗಬಾರದು ಅನ್ನೋದು ಯೋಗಿ ಆದಿತ್ಯನಾಥ್ ಅವರ ಅಭಿಪ್ರಾಯ. ಆದ್ರೆ ಉತ್ತರ ಪ್ರದೇಶದಲ್ಲಿ ವಿತರಿಸಬೇಕಿದ್ದ ಈ ಸ್ಕೂಲ್ ಬ್ಯಾಗ್ ಗಳು ಗುಜರಾತ್ ಗೆ ಹೇಗೆ ಬಂತು ಎಂಬುದು ಮಾತ್ರ ನಿಗೂಢವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...