alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ಬರ್ ಪದಮ್ಸೀ ಅವರ ಕಲಾಕೃತಿ ದಾಖಲೆಯ ಮೊತ್ತಕ್ಕೆ ಮಾರಾಟ

PAINTING 19 CROREಅಕ್ಬರ್ ಪದಮ್ಸೀ ಅವರ ‘ಗ್ರೀಕ್ ಲ್ಯಾಂಡ್ ಸ್ಕೇಪ್’ ಕಲಾಕೃತಿ ಹೊಸ ದಾಖಲೆ ಬರೆದಿದೆ. 19.19 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಜಗತ್ತಿನಲ್ಲಿಯೇ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಕಲಾಕೃತಿ ಎಂಬ ಗೌರವಕ್ಕೂ ಪಾತ್ರವಾಗಿದೆ.

ಸ್ಯಾಫ್ರಾನ್ ಆರ್ಟ್ ಹೆಸರಿನಲ್ಲಿ ಕಲಾಕೃತಿಗಳ ಹರಾಜು ಪ್ರಕ್ರಿಯೆಯನ್ನು ಆಯೋಜಿಸಲಾಗಿತ್ತು. 4.3 ಅಡಿ ಎತ್ತರ ಹಾಗೂ 12 ಅಡಿ ಅಗಲದ ಈ ಬೃಹತ್ ಪೇಂಟಿಂಗ್ 7-9 ಕೋಟಿಗೆ ಹರಾಜಾಗಬಹುದು ಎಂಬ ನಿರೀಕ್ಷೆಯಿತ್ತು. ಆದ್ರೆ ಅದನ್ನೂ ಮೀರಿ ದುಪ್ಪಟ್ಟು ಹಣಕ್ಕೆ ಬಿಕರಿಯಾಗಿದೆ.

ಇದಕ್ಕೂ ಮೊದಲು ಅತಿ ಹೆಚ್ಚು ಅಂದ್ರೆ 9.3 ಕೋಟಿ ರೂಪಾಯಿಗೆ ಮಾರಾಟವಾದ ಕಲಾಕೃತಿ ಸೋದೆಬಿ ಅವರ ‘ರಿಕ್ಲೈನಿಂಗ್ ನ್ಯೂಡ್’ ಅಂತಾ ಸ್ಯಾಫ್ರಾನ್ ಆರ್ಟ್ ನ ಸಿಇಓ ಹ್ಯುಗೊ ವೆಹೆ ತಿಳಿಸಿದ್ದಾರೆ. ಅಕ್ಬರ್ ಪದಮ್ಸೀ ಅವರ ಕಲಾಕೃತಿಯಲ್ಲಿ 1960 ರ ದಶಕದ ಚಿತ್ರಣವಿದೆ. ಇದನ್ನು ಮೊದಲು ಮುಂಬೈನ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿತ್ತು. ನಸ್ರೀನ್ ಮೊಹಮದಿ ಅವರ 1960 ರ ತೈಲವರ್ಣ ಪೇಂಟಿಂಗ್ ಕೂಡ 2.4 ಕೋಟಿ ರೂಪಾಯಿಗೆ ಹರಾಜಾಗಿದೆ. ಗಗನೇಂದ್ರನಾಥ್ ಠಾಗೋರ್ ಅವರ ‘ರುಬೇನ್ಸ್ ಸ್ಕೆಚ್ ಬುಕ್’ ಕಲಾಕೃತಿ 1.8 ಕೋಟಿ ರೂ.ಗಳಿಗೆ, ವಿ.ಎಸ್.ಗಾಯ್ತೊಂಡೆ ಅವರ ಆಯಿಲ್ ಪೇಂಟಿಂಗ್ 10.12 ಕೋಟಿ ರೂಪಾಯಿಗೆ, ಎಂ.ಎಫ್.ಹುಸೇನ್ ರ ‘ಡ್ರೀಮ್ಸ್’ ಕಲಾಕೃತಿ 4.4 ಕೋಟಿ ರೂ.ಗೆ, ಎಸ್.ಎಚ್. ರಾಝಾ ಅವರ ಕಲಾಕೃತಿ 3.84 ಕೋಟಿ ರೂ.ಗೆ ಮಾರಾಟವಾಗಿರುವುದು ವಿಶೇಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...