alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟಿಗ ಅಜಿಂಕ್ಯಾ ರಹಾನೆ ತಂದೆ ಅರೆಸ್ಟ್

ಟೀಂ ಇಂಡಿಯಾ ಆಟಗಾರ ಅಜಿಂಕ್ಯಾ ರಹಾನೆ ಅವರ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಧುಕರ್ ಬಾಬುರಾವ್ ರಹಾನೆ ಪ್ರಯಾಣಿಸುತ್ತಿದ್ದ ಕಾರು ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದಿತ್ತು. ಆಕೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಪೊಲೀಸರು ರಹಾನೆ ತಂದೆಯನ್ನು ಅರೆಸ್ಟ್ ಮಾಡಿದ್ದಾರೆ.

ಕೊಲ್ಹಾಪುರದ ಬಳಿ ಈ ಘಟನೆ ಸಂಭವಿಸಿದೆ. 67 ವರ್ಷದ ಆಶಾತಾಯಿ ಕಾಂಬ್ಳೆ ಮೃತ ದುರ್ದೈವಿ. ಕಾಗಲ್ ಬಸ್ ನಿಲ್ದಾಣದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧುಕರ್ ರಹಾನೆ ಅವರ ಕಾರು ಆಶಾತಾಯಿಗೆ ಡಿಕ್ಕಿ ಹೊಡೆದಿತ್ತು. ಕಾರನ್ನು ಅವರೇ ಚಲಾಯಿಸುತ್ತಿದ್ರಾ ಅನ್ನೋದು ಸ್ಪಷ್ಟವಾಗಿಲ್ಲ.

ಹುಂಡೈ ಐ20 ಕಾರಿನಲ್ಲಿ ಮಧುಕರ್ ರಹಾನೆ ತಮ್ಮ ಕುಟುಂಬದವರೊಂದಿಗೆ ತೆರಳುತ್ತಿದ್ರು. ಅಪಘಾತ ಸಂಭವಿಸುತ್ತಿದ್ದಂತೆ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ರು. ಕೂಡಲೇ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆದ್ರೆ ತೀವ್ರ ಗಾಯಗೊಂಡಿದ್ದ ಆಕೆ ಮೃತಪಟ್ಟಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...