alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಟೆಲ್ ಡೇಟಾ ಪ್ಯಾಕ್ ಬಳಕೆದಾರರಿಗೆ ಖುಷಿ ಸುದ್ದಿ

airtel 377464ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್, ತನ್ನ ಪ್ರಿ ಪೇಯ್ಡ್ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಡೇಟಾ ಪ್ಯಾಕ್ ಹಾಕಿಸಿಕೊಂಡ ಪ್ರಿ ಪೇಯ್ಡ್ ಗ್ರಾಹಕರು, ನಿಗದಿತ ಸಮಯದಲ್ಲಿ ಇದನ್ನು ಬಳಸಿದರೆ ಅಂತವರಿಗೆ ಶೇ.50 ರಷ್ಟು ಡೇಟಾ ಮರಳಿಸಲಾಗುತ್ತದೆಂದು ಹೇಳಿದೆ.

‘ಹ್ಯಾಪಿ ಅವರ್ಸ್’ ಹೆಸರಿನಲ್ಲಿ ಈ ಆಫರ್ ನೀಡಲಾಗಿದ್ದು, ಬೆಳಗಿನ ಜಾವ 3 ಗಂಟೆಯಿಂದ 5 ಗಂಟೆಯವರೆಗೆ ಬಳಕೆಯಾಗುವ ಡೇಟಾದ ಪೈಕಿ ಶೇ. 50 ರಷ್ಟನ್ನು ಮರಳಿಸಲಾಗುತ್ತದೆ. ಉದಾಹರಣೆಗೆ ಬಳಕೆದಾರರು ಈ ಅವಧಿಯಲ್ಲಿ 100 ಎಂಬಿ ಡೇಟಾ ಬಳಕೆ ಮಾಡಿದರೆ ಅಂತವರಿಗೆ 50 ಎಂಬಿ ಡೇಟಾ ಮರಳಿಸಲಾಗುತ್ತದೆ.

ಆದರೆ ಇದಕ್ಕಾಗಿ ಬೆಳಿಗ್ಗೆ 3 ಗಂಟೆಗೆ ಬಳಕೆದಾರರು ಏಳಲು ಸಾಧ್ಯವಾಗುವುದಿಲ್ಲ. ಅಂತವರು ತಾವು ಡೌನ್ ಲೋಡ್ ಮಾಡಿಕೊಳ್ಳಬೇಕಿರುವುದನ್ನು ಆ ವೇಳೆಗೆ ಶೆಡ್ಯೂಲ್ ಮಾಡಿಟ್ಟರೆ ಬಳಕೆ ಸಾಧ್ಯವಾಗುತ್ತದೆ. ಈ ರೀತಿ ಡೌನ್ ಲೋಡ್ ಶೆಡ್ಯೂಲ್ ಮಾಡುವ ಹಲವು ಆಪ್ ಗಳು ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...