alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರನ್ನು ಸೆಳೆಯಲು ನೂತನ ಆಫರ್ ಪರಿಚಯಿಸಿದ ಏರ್ ಟೆಲ್

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದರ ಸಮರದಲ್ಲಿ ಹೋರಾಡಲು ಭಾರತಿ ಏರ್ ಟೆಲ್, ವಿನೂತನ ಆಫರ್ ಒಂದನ್ನು ನೀಡಿದೆ. ಆದರೆ ಈ ಆಫರ್ ಸದ್ಯ ಕರ್ನಾಟಕದಲ್ಲಿ ಲಭ್ಯವಿಲ್ಲ.

ಏರ್ ಟೆಲ್ ತನ್ನ ನೂತನ ಪ್ರೀಪೇಡ್ ಆಫರ್ ನಲ್ಲಿ ಅನ್ ಲಿಮಿಟೆಡ್ ಲೋಕಲ್, ಎಸ್ ಟಿ ಡಿ ಕರೆಗಳೊಂದಿಗೆ ಪ್ರತಿನಿತ್ಯ ಮೂರು ಜಿಬಿ ಇಂಟರ್ ನೆಟ್ ನೀಡುವುದಾಗಿ ಹೇಳಿಕೊಂಡಿದೆ. ಆದರೆ ಕೇವಲ 14 ದಿನ ವ್ಯಾಲಿಡಿಟಿಯ ಈ ಆಫರ್ ನ್ನು 181 ರೂಪಾಯಿಗೆ ನೀಡಿದೆ. ಇದರೊಂದಿಗೆ 25ರಿಂದ 245 ಅಂತರದ ಒಟ್ಟಾರೆ ಆರು ವಿಶೇಷ ಪ್ಯಾಕೇಜ್ ಗಳನ್ನು ಏರ್ ಟೆಲ್ ಘೋಷಿಸಿದೆ.

ಏರ್ ಟೆಲ್ ಪರಿಚಯಿಸಿರುವ 181 ಪ್ಯಾಕೇಜ್ ಆಫರ್ ನ್ನು ಕೆಲ ವೃತ್ತಗಳಿಗೆ ಮಾತ್ರ ಪರಿಚಯಿಸಿದ್ದು, ಸದ್ಯ ದಕ್ಷಿಣ ಭಾರತದ ಗ್ರಾಹಕರಿಗೆ ಈ ಆಫರ್ ಲಭ್ಯವಿಲ್ಲ. ಉತ್ತರ ಭಾರತದ ಗ್ರಾಹಕರಿಗೆ ಈ ಆಫರ್ ಲಭ್ಯವಿದ್ದು, 14 ದಿನದಲ್ಲಿ ಒಟ್ಟು 42 ಜಿಬಿ ಡೇಟಾವನ್ನು ಬಳಸಬಹುದಾಗಿದೆ. ಇದರೊಂದಿಗೆ ಪ್ರತಿನಿತ್ಯ 100 ಎಸ್ಎಂಎಸ್ ನ್ನು ಉಚಿತವಾಗಿ ನೀಡಲಾಗಿದೆ ಎಂದು ಸಂಸ್ಥೆ ಪ್ರಕಟಿಸಿದೆ.

ಸದ್ಯ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಮೂರು ಜಿಬಿ ಡೇಟಾ ನೀಡುವ ಅತಿ ಕಡಿಮೆ ಮೌಲ್ಯದ ಪ್ಯಾಕ್ ಇದಾಗಿದೆ. ಏರ್ ಟೆಲ್ ಹೊರತುಪಡಿಸಿದರೆ, ಜಿಯೋ ತನ್ನ ಗ್ರಾಹಕರಿಗೆ 198 ಮೌಲ್ಯ ಪ್ಯಾಕ್ ನಲ್ಲಿ 28 ದಿನಗಳ ಅವಧಿಗೆ ಪ್ರತಿನಿತ್ಯ ಎರಡು ಜಿಬಿ ಡೇಟಾ ನೀಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...