alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಟೆಲ್ ನಿಂದ ಈಗ ಮತ್ತೊಂದು ಆಫರ್

airtel_big_1

ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ ಏರ್ ಟೆಲ್ ತನ್ನ ಗ್ರಾಹಕರಿಗೆ ಮತ್ತೊಂದು ಕೊಡುಗೆ ನೀಡಿದೆ. ವಿದೇಶ ಯಾತ್ರೆ ಮಾಡುವವರಿಗಾಗಿ ಫ್ರೀ ರೋಮಿಂಗ್ ಮತ್ತು ಇಂಟರ್ ನೆಟ್ ಡಾಟಾಗಳಲ್ಲಿ ಭಾರೀ ಕೊಡುಗೆಯನ್ನು ಘೋಷಿಸಿದೆ. ಫ್ರೀ ರೋಮಿಂಗ್ ನಿಂದಾಗಿ ಏರ್ ಟೆಲ್ ಗ್ರಾಹಕರು ವಿದೇಶದಲ್ಲಿದ್ದ ವೇಳೆ ಭಾರತದಿಂದ ಬರುವ ಕರೆಗಳು ಉಚಿತವಾಗಿರಲಿವೆ.

ಹಾಗೆಯೇ ಈ ಮೊದಲು ಪ್ರತಿ ಎಂಬಿ ಗೆ ಇದ್ದ 650 ರೂ. ಗಳ ದರವನ್ನು ಈಗ ಕೇವಲ 3 ರೂಪಾಯಿಗೆ ಇಳಿಸುವ ಮೂಲಕ ವಿದೇಶ ಪ್ರಯಾಣ ಕೈಗೊಳ್ಳುವವರಿಗೆ ಭರ್ಜರಿ ಕೊಡುಗೆ ನೀಡಿದೆ. ಇದಲ್ಲದೇ ರೋಮಿಂಗ್ ಗ್ರಾಹಕರು, ಸ್ಥಾನೀಯ ನಂಬರ್ ಅಥವಾ ಭಾರತದ ಯಾವುದೇ ನಂಬರ್ ಗೆ ಪ್ರತಿ ನಿಮಿಷಕ್ಕೆ 3 ರೂಪಾಯಿ ದರದಲ್ಲಿ ಕರೆ ಮಾಡಬಹುದಾಗಿದೆ.

ಇದಕ್ಕಾಗಿ ಕಂಪನಿ 1, 10 ಮತ್ತು 30 ದಿನಗಳ ವ್ಯಾಲಿಡಿಟಿ ಹೊಂದಿರುವ ರೀ ಚಾರ್ಜ್ ಪ್ಯಾಕ್ ಘೋಷಿಸಿದೆ . ಇವು ಕ್ರಮವಾಗಿ 10, 45 ಮತ್ತು 75 ಡಾಲರ್ ಗಳಲ್ಲಿ ಲಭ್ಯವಿದೆ. ಈ ಆಫರ್ ಅಕ್ಟೋಬರ್ 15 ರ ಸುಮಾರಿಗೆ ಸಿಗಲಿದೆ ಎಂದು ಕಂಪನಿ ತಿಳಿಸಿದ್ದು, ಅಮೆರಿಕಾ, ಯುಕೆ, ಸಿಂಗಾಪುರ್, ಯುಎಇ, ಕೆನಡಾಕ್ಕೆ ಪ್ರಯಾಣ ಬೆಳೆಸುವವರಿಗೆ ಆಫರ್ ಲಭ್ಯವಾಗಲಿದೆ. ಪೋಸ್ಟ್ ಪೇಯ್ಡ್ ಹಾಗೂ ಪ್ರೀ ಪೇಯ್ಡ್ ಗ್ರಾಹಕರಿಗೆ ಈ ಕೊಡುಗೆ ಅನ್ವಯಿಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...